ಕೊಚ್ಚಿ: ಸುಮಾರು 230 ಜನರ ಚುನಾವಣಾ ಗುರುತಿನ ಚೀಟಿಗಳು ಕಸರಾಶಿಯಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಕಂಡುಬಂದ ಘಟನೆ ನಡೆದಿದೆ. ಗುರುತು ಚೀಟಿಗಳು ಒಡಿಶಾ ಮೂಲದ ಕಾರ್ಮಿಕರ ಹೆಸರಲ್ಲಿ ಕಂಡುಬಂದಿವೆ.
ಕಳಮಸ್ಸೆರಿ ಪುರಸಭೆಯ ವಿಟಕುಳ ವಾರ್ಡ್‍ನ ಎಲಂಜಿಕುಳಂ ಪ್ರದೇಶದಿಂದ ಅವು ಪತ್ತೆಯಾಗಿವೆ. ಪೋಲೀಸರು ಅದನ್ನು ವಶಕ್ಕೆ ತೆಗೆದುಕೊಂಡರು. ಪ್ರತಿ ಕಾರ್ಡ್ ಪರಿಶೀಲಿಸಿದ ನಂತರ ಹೆಚ್ಚಿನ ತನಿಖೆ ನಡೆಸಲು ಪೋಲೀಸರು ನಿರ್ಧರಿಸಿದ್ದಾರೆ. ಆದರೆ ಸ್ಥಳೀಯರು ದ್ವಿ-ಮತ ವಿವಾದದ ಬಗ್ಗೆ ಉನ್ನತ ಮಟ್ಟದ ವಿಚಾರಣೆಗೆ ಒತ್ತಾಯಿಸಿರುವರು.
ಈ ಹಿಂದೆ ಒಟ್ಟಪಾಲಂನಲ್ಲಿ ಇದೇ ರೀತಿಯ ಗುರುತಿನ ಚೀಟಿಗಳು ಕಂಡುಬಂದಿವೆ. ಉಪೇಕ್ಷಿತ ಹತ್ತು ಗುರುತಿನ ಚೀಟಿಗಳು ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ಪತ್ತೆಯಾಗಿದ್ದವು. ಹೆಚ್ಚಿನ ಕಾರ್ಡ್‍ಗಳು ಕದಂಪಾಜಿಪುರಂ ಗ್ರಾಮ ಪಂಚಾಯಿತಿಯ ಅಜಿಯನ್ನೂರ್ ಪ್ರದೇಶದಲ್ಲಿದ್ದವರ ಹೆಸರಲ್ಲಿತ್ತು.
ಇಂತಹ ವಿದ್ಯಮಾನಗಳಿಂದ ರಾಜ್ಯದಲ್ಲಿ ವ್ಯಾಪಕ ಪ್ರಮಾಣದ ಚುನಾವಣಾ ಬುಡಮೇಲು ಕೃತ್ಯಗಳು ನಡೆದಿವೆ ಎಂಬುದಕ್ಕೆ ಸಾಕ್ಷಿಯಾಗಿದೆ.