ತಿರುವನಂತಪುರ: ರಾಜ್ಯದಲ್ಲಿ ಏ..24 ಮತ್ತು 25 ರಂದು ಪ್ರಬಲ ನಿಯಂತ್ರಣ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿರುವರು. ಈ ದಿನಾಂಕಗಳಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿಸಲಾಗುತ್ತದೆ. ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ 24 ರಂದು ರಜೆ ನೀಡಲಾಗುವುದು.
ಆದರೆ ಪರೀಕ್ಷೆಗಳು ಯಥಾವತ್ತಾಗಿ ನಡೆಯಲಿದೆ. ಸೋಂಕಿಗೆ ಒಳಗಾಗದಂತೆ ಸಾಧ್ಯವಾದಷ್ಟು ಜನರನ್ನು ರಕ್ಷಿಸುವುದು ಇಂತಹ ನಿಯಂತ್ರಣದ ಗುರಿಯಾಗಿದೆ. ಸೋಂಕು ಹರಡುವುದನ್ನು ತಡೆಯಲು ರಾಜ್ಯ ಸಿದ್ಧವಾಗಿದೆ. ಸರ್ಕಾರ ಸಮಗ್ರ ಮತ್ತು ಸುಸಜ್ಜಿತ ವ್ಯವಸ್ಥೆಯನ್ನು ಸ್ಥಾಪಿಸಿದೆ. ರೋಗ ಹರಡುವಿಕೆಯ ಪ್ರಮಾಣವು ಪ್ರಬಲಗೊಳ್ಳುತ್ತಿರುವುದರಿಂದ ಜನರು ಜನಸಂದಣಿಯಲ್ಲಿ ಒಳಗಾಗದಂತೆ ಗಮನ ವಹಿಸಬೇಕು. ಮೊದಲ ತರಂಗದಲ್ಲಿ ಕೋವಿಡ್ ಗೆ ಶೇಕಡಾ 11 ಕ್ಕಿಂತ ಕಡಿಮೆ ಜನರಿಗೆ ಸೋಂಕು ಉಂಟಾಗಿತ್ತು. ರಾಜ್ಯವು ಅತ್ಯಂತ ಕಡಿಮೆ ಮರಣ ಪ್ರಮಾಣವನ್ನು ಕಾಯ್ದುಕೊಳ್ಳಲು ಸಾಧ್ಯವಾಯಿತು.
ಆದರೆ ಇದೀಗ ಎರಡನೇ ಅಲೆಯಲ್ಲಿ ರಾಜ್ಯವು ದಿ.ಪೀಕ್(ಅತ್ಯುಚ್ಚ ಮಟ್ಟ) ನೀತಿಯನ್ನು ಅಳವಡಿಸಿಕೊಂಡಿದೆ. ಈಗ ಕ್ರಷ್ ದಿ ಕರ್ವ್ ನ್ನು ಅಳವಡಿಸಲಾಗಿದೆ. ಮೊದಲ ಹಂತದ ಎಲ್ಲಾ ನಿಯಂತ್ರಣ ಕ್ರಮಗಳೂ ಈ ವೇಳೆಯೂ ಜಾರಿಯಲ್ಲಿರುವುದು. ಬ್ರೇಕ್ ದಿ ಚೈನ್ ಇನ್ನಷ್ಟು ಬಲವಾಗಿರುತ್ತದೆ. ಮಾನದಂಡಗಳಿಗೆ ಅನುಸಾರವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯಾಡಳಿತ ಸಂಸ್ಥೆಗಳ ನೆರವು ಪಡೆಯಲಾಗುವುದು. ರೋಗದ ಆಕ್ರಮಣವನ್ನು ಸಾಧ್ಯವಾದಷ್ಟು ದೂರಗೊಳಿಸಬೇಕು ಎಂದು ಸಿಎಂ ಹೇಳಿರುವರು.
ಕೋವಿಡ್ ಭಾರತದಲ್ಲಿ ವರದಿ ಮಾಡಿದ ಮೊದಲ ರಾಜ್ಯ ಕೇರಳವಾಗಿದ್ದರೂ, ಪ್ರಸ್ತುತ ಇಲ್ಲಿ ಕೊನೆಯ ಉತ್ತುಂಗದಲ್ಲಿದೆ. ಮೊದಲ ತರಂಗವನ್ನು ಜಯಿಸಲು ಮತ್ತು ಎರಡನೇ ಹಂತವನ್ನು ಎದುರಿಸಲು ಬಲವಾದ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಪ್ರಸ್ತುತ ರಾಜ್ಯಕ್ಕೆ 212 ಮೆಟ್ರಿಕ್ ಟನ್ ಆಮ್ಲಜನಕ ಅಗತ್ಯವಿದ್ದು, 74.25 ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದಿಸುವ ಗುರಿ ಇರಿಸಲಾಗುವುದು ಎಂದು ಅವರು ಹೇಳಿರುವರು.