HEALTH TIPS

ಏ.24ರಿಂದ ಕೋವಿಡ್ ಯೋಧರಿಗೆ ಹೊಸ ವಿಮೆ

          ನವದೆಹಲಿ: ಎಲ್ಲ ಕೋವಿಡ್‌ ಯೋಧರಿಗೆ ಏಪ್ರಿಲ್ 24ರವರೆಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ (ಪಿಎಂಜಿಕೆಪಿ) ಪ್ಯಾಕೇಜ್ ಅಡಿಯಲ್ಲಿ ಬಾಕಿ ನೀಡಬೇಕಿದ್ದ ವಿಮಾಸೌಲಭ್ಯವನ್ನು ಇತ್ಯರ್ಥಗೊಳಿಸಿ, ನಂತರದ ದಿನಾಂಕದಿಂದ ಹೊಸದಾಗಿ ಆರೋಗ್ಯ ವಿಮೆ ಮಾಡಿಸುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಿಸಿದೆ.


        ಈ ಕುರಿತು ಟ್ವೀಟ್ ಮಾಡಿರುವ ಸಚಿವಾಲಯ, 'ಕೊರೊನಾ ಯೋಧರಿಗೆ ಹೊಸ ವಿಮಾ ಪಾಲಿಸಿಯನ್ನು ಮಾಡಿಸಲಾಗುವುದು. ಈ ಸಂಬಂಧ ಸಚಿವಾಲಯ ನ್ಯೂ ಇಂಡಿಯಾ ಅಶ್ಯೂರೆನ್ಸ್ ವಿಮಾ ಕಂಪನಿಯೊಂದಿಗೆ ಮಾತುಕತೆ ನಡೆಸುತ್ತಿದೆ' ಎಂದು ತಿಳಿಸಿದೆ.

          'ಇಲ್ಲಿವರೆಗೆ ವಿಮಾ ಕಂಪನಿಯು 287 ವಿಮಾ ಅರ್ಜಿಗಳನ್ನು ವಿಲೇವಾರಿ ಮಾಡಿ, ಹಣವನ್ನು ನೀಡಿದೆ. ಸರ್ಕಾರದ ಈ ಯೋಜನೆ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌ ವಿರುದ್ಧ ಹೋರಾಡಲು ಉತ್ತೇಜನ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದೆ' ಎಂದು ಸಚಿವಾಲಯ ತಿಳಿಸಿದೆ.

       2020ರ ಮಾರ್ಚ್‌ನಲ್ಲಿ ಪಿಎಂಜಿಕೆಪಿ ಯೋಜನೆ ಘೋಷಿಸಲಾಗಿದ್ದು, ಇದನ್ನು ಏಪ್ರಿಲ್ 24 ರವರೆಗೆ ಮೂರು ಬಾರಿ ವಿಸ್ತರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಈ ಯೋಜನೆಯಡಿ ಪ್ರತಿ ಕುಟುಂಬಕ್ಕೆ ₹ 50 ಲಕ್ಷ ಮೊತ್ತದ ವಿಮೆ ಇದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries