ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಹgಡುವಿಕೆಯ ತೀವ್ರ ಗತಿಯ ಹಿನ್ನೆಲೆಯಲ್ಲಿ ನಡೆಸಿದ ಎರಡು ದಿನಗಳ ಸಾಮೂಹಿಕ ತಪಾಸಣೆಗೆ ಜನರ ಸಂಪೂರ್ಣ ಸಹಕಾರ ಲಭ್ಯವಾಗಿರುವುದು ಪ್ರಾಥಮಿಕ ವರದಿಗಳಿಂದ ದೃಢಪಟ್ಟಿದೆ. 2.5 ಲಕ್ಷ ಪರೀಕ್ಷೆಗಳನ್ನು ನಡೆಸುವ ಲಕ್ಷ್ಯ ಇರಿಸಲಾಗಿತ್ತಾದರೂ ಎರಡು ದಿನಗಳಲ್ಲಾಗಿ ರಾಜ್ಯಾದ್ಯಂತ 3,00,971 ತಪಾಸಣೆ ನಡೆಸಲಾಯಿತು. ಆರ್‍ಟಿಪಿಸಿಆರ್ - 1,54,775, ಆಂಟಿಜೆನ್ - 144397 ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಕೋಝಿಕೋಡ್ ಜಿಲ್ಲೆಯಲ್ಲಿ ಅತಿ ಹೆಚ್ಚು ತಪಾಸಣೆ ನಡೆಸಲಾಗಿದೆ (39,565). ತಿರುವನಂತಪುರದಲ್ಲಿ 29,008 ಮತ್ತು ಎರ್ನಾಕುಳಂನಲ್ಲಿ 36,671 ಪರೀಕ್ಷೆಗಳನ್ನು ನಡೆಸಲಾಗಿದೆ. ಎಲ್ಲಾ ಜಿಲ್ಲೆಗಳು ಗುರಿಯನ್ನು ಮೀರಿ ತಪಾಸಣೆ ಪೂರ್ಣಗೊಳಿಸಿದೆÉ. ಕೋವಿಡ್ ಗುಂಪು ಪರೀಕ್ಷೆಗೆ ಸಂಪೂರ್ಣ ಸಾರ್ವಜನಿಕ ಬೆಂಬಲ ವ್ಯಕ್ತವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.