ನವದೆಹಲಿ: ಮೇ 1ರಿಂದ 18 ವರ್ಷರಿಂದ 44 ವರ್ಷ ವಯಸ್ಸಿನವರಿಗೆ ಕರೊನಾ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಅದರ ನೋಂದಣಿ ಪ್ರಕ್ರಿಯೆಯನ್ನು ಇಂದಿನಿಂದ ಆರಂಭಿಸಲಾಗಿದೆ. ಮೊದಲನೇ ದಿನವೇ ಹೆಚ್ಚಿನ ಪ್ರಮಾಣದಲ್ಲಿ ನೋಂದಣಿಯಾಗಿದ್ದು, ಸರ್ವರ್ ಕೂಡ ಡೌನ್ ಆದ ಘಟನೆ ನಡೆದಿದೆ.
ಬುಧವಾರ ಸಂಜೆ 4 ಗಂಟೆಯಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಪ್ರತಿ ನಿಮಿಷಕ್ಕೆ 27 ಲಕ್ಷ ಜನರು ಲಸಿಕೆ ಪಡೆಯುವುದಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಭಾರೀ ಪ್ರಮಾಣದಲ್ಲಿ ನೋಂದಣಿ ಆಗಿದ್ದರಿಂದಾಗಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಕೋವಿನ್ ಆಯಪ್ ಮತ್ತು ಆರೋಗ್ಯ ಸೇತು ಆಯಪ್ ಸರ್ವರ್ ಡೌನ್ ಆಗಿದ್ದಾಗಿ ಅನೇಕರು ದೂರಿದ್ದಾರೆ. ಅನೇಕರಿಗೆ ಒಟಿಪಿ ಬಂದಿಲ್ಲ ಎನ್ನುವ ದೂರೂ ಕೇಳಿಬಂದಿದೆ. ಕೆಲ ಸಮಯದ ಬಳಿಕೆ ಸರ್ವರ್ ಸರಿಯಾಗಿದ್ದಾಗಿ ತಿಳಿಸಲಾಗಿದೆ.
ಸರ್ವರ್ ಸರಿಯಾಗಿರುವ ಬಗ್ಗೆ ಆರೋಗ್ಯ ಸೇತು ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ನಲ್ಲೂ ಟ್ವೀಟ್ ಮಾಡಿ ಮಾಹಿತಿ ನೀಡಲಾಗಿದೆ.