ನವದೆಹಲಿ : ಬುಧವಾರದ ಲೆಕ್ಕಾಚಾರದಂತೆ ಭಾರತದಲ್ಲಿ ಕರೊನಾದಿಂದ 3,293 ಸಾವುಗಳು ಸಂಭವಿಸಿದ್ದು, ಇದರೊಂದಿಗೆ ಒಟ್ಟು ಕೊರೊನಾ ಸಾವಿನ ಸಂಖ್ಯೆ ಅಧಿಕೃತವಾಗಿ 2 ಲಕ್ಷ ದಾಟಿದೆ. ಜಗತ್ತಿನಲ್ಲಿ ಈ ಪ್ರಮಾಣದ ಕೊರೊನಾ ಸಂಬಂಧೀ ಸಾವುಗಳನ್ನು ದಾಖಲಿಸಿರುವ ಅಮೆರಿಕ, ಬ್ರೆಜಿಲ್ ಮತ್ತು ಮೆಕ್ಸಿಕೋ ದೇಶಗಳ ಸಾಲಿಗೆ ಇದೀಗ ಭಾರತವೂ ಸೇರಿದಂತಾಗಿದೆ.
ಮತ್ತೊಂದೆಡೆ, ಕೊರೊನಾ ಸೋಂಕು ತಗುಲಿ ಗುಣಮುಖವಾಗಿರುವವರ ಸಂಖ್ಯೆಯು 1,48,17,371 ಆಗಿದ್ದು, ರೋಗದ ಮರಣ ದರವು ಶೇ. 1.12 ರಷ್ಟಿದೆ ಎಂದು ಆರೋಗ್ಯ ಸಚಿವಾಲಯದ ಬುಲೆಟಿನ್ ತಿಳಿಸಿದೆ. ನಿನ್ನೆಯ ದಿನ 3,60,960 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,79,97,267 ಮುಟ್ಟಿದೆ.
ಕಳೆದ 24 ಗಂಟೆಗಳಲ್ಲಿ ಗರಿಷ್ಠ ಪ್ರಕರಣಗಳು ದಾಖಲಾದ ಐದು ಅಗ್ರ ರಾಜ್ಯಗಳು ಮಹಾರಾಷ್ಟ್ರ - 66,358 ಪ್ರಕರಣಗಳು, ಉತ್ತರಪ್ರದೇಶ - 32,921 ಪ್ರಕರಣಗಳು, ಕೇರಳ - 32,819 ಪ್ರಕರಣಗಳು, ಕರ್ನಾಟಕ - 31,830 ಪ್ರಕರಣಗಳು ಮತ್ತು ದೆಹಲಿ - 24,149 ಪ್ರಕರಣಗಳು. ದೇಶದ ಒಟ್ಟು ಪ್ರಕರಣಗಳಲ್ಲಿ ಶೇ. 52.1 ರಷ್ಟು ಈ ಐದು ರಾಜ್ಯಗಳಿಂದ ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ ಸಂಭವಿಸಿದ ಕರೊನಾ ಸಾವುಗಳಲ್ಲಿ ಮಹಾರಾಷ್ಟ್ರದಲ್ಲಿ 895 ಮತ್ತು ದೆಹಲಿಯಲ್ಲಿ 381 ಸಾವುಗಳು ವರದಿಯಾಗಿವೆ.