HEALTH TIPS

3ನೇ ಹಂತದ ಲಸಿಕೆ ಕಾರ್ಯಕ್ರಮ ಇಂದಿನಿಂದ: 2.45 ಕೋಟಿಗೂ ಹೆಚ್ಚು ಜನರಿಂದ ನೋಂದಣಿ

            ನವದೆಹಲಿ: ಮೇ 1ರಿಂದ ಆರಂಭವಾಗಲಿರುವ ಮೂರನೇ ಹಂತದ ಲಸಿಕೆ ಕಾರ್ಯಕ್ರಮದಡಿ ಕೋವಿಡ್‌ ಲಸಿಕೆ ಪಡೆಯಲು 2.45 ಕೋಟಿಗೂ ಅಧಿಕ ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ.

          ಇಂದಿನಿಂದ (ಮೇ 1ರಿಂದ ) 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತಿದ್ದು, ಕೋ-ವಿನ್‌ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕಿದೆ.

            ಏ. 28ರಂದು ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಅದೇ ದಿನ 1.37 ಕೋಟಿಗೂ ಹೆಚ್ಚು ಜನರು ನೋಂದಣಿ ಮಾಡಿದ್ದಾರೆ. ಏ. 29ರಂದು 1.04 ಕೋಟಿಗೂ ಅಧಿಕ ಜನರು                  ನೋಂದಾಯಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

          ಈ ವರೆಗೆ 15.22 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. 15,22,45,179 ಡೋಸ್‌ಗಳಷ್ಟು ಲಸಿಕೆಯನ್ನು  ಬಳಸಲಾಗಿದೆ. ದೇಶದಲ್ಲಿ ಈ ವರೆಗೆ ನೀಡಲಾದ ಲಸಿಕೆ ಪೈಕಿ, ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ ಸೇರಿದಂತೆ 10 ರಾಜ್ಯಗಳಲ್ಲಿ ನೀಡಲಾದ ಲಸಿಕೆ ಪ್ರಮಾಣ ಒಟ್ಟು ಶೇ 67.08 ರಷ್ಟು ಎಂದೂ ಸಚಿವಾಲಯ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries