ಕಾಸರಗೋಡು: ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಚಟುವಟಿಕೆ ನಡೆಸುತ್ತಿರುವ 39 ತಾಂತ್ರಿಕ ಪ್ರೌಢಶಾಲೆಗಳಿಗೆ 2021-22 ಶೈಕ್ಷಣಿಕ ವರ್ಷದ ಪ್ರವೇಶಾತಿ ಗೆ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ಏ.30 ವರೆಗೆ ವಿಸ್ತರಣೆ ನಡೆಸಲಾಗಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಶಾಲೆಗಳಿಗೆ ನೇರವಾಗಿ ತೆರಳಿ ಅರ್ಜಿ ಸಲ್ಲಿಕೆ ನಡೆಸುವಂತಿಲ್ಲ.ತಿತಿತಿ.ಠಿoಟಥಿಚಿಜmissioಟಿ.oಡಿg/ಣhsಎಂಬ ವಿಳಾಸದಲ್ಲಿ ಆನ್ ಲೈನ್ ರೂಪದಲ್ಲಿ ಅರ್ಜಿ ಸಲ್ಲಿಸಬಹುದು. ಪ್ರವೇಶಾತಿ ಪರೀಕ್ಷೆಯ ಹಿನ್ನೆಲೆಯಲ್ಲಿ ಮೀಸಲಾತಿ ಕ್ರಮಗಳನ್ನು ಪಾಲಿಸಿ ವಿದ್ಯಾರ್ಥಿಗಳ ಆಯ್ಕೆ ನಡೆಯಲಿದೆ. ಪ್ರತಿ ತಾಂತ್ರಿಕ ಪ್ರೌಢಶಾಲೆಗೆ ಮಂಜೂರು ಮಾಡಿರುವ ಸೀಟುಗಳಿಗಿಂತ ಅಧಿಕ ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆಯಾದರೆ ಮಾತ್ರ ಪ್ರವೇಶಾತಿ ಪರೀಕ್ಷೆ ನಡೆಸಲಾಗುವುದು. 7ನೇ ತರಗತಿಗೆ ಸಮಾನವಾಗಿರುವ ಇಂಗ್ಲೀಷ್, ಗಣಿತ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಸಾಮಾನ್ಯ ವಿಜ್ಞಾನ, ಮೆಂಟಲ್ ಎಬಿಲಿಟಿ ಎಂಬ ವಿಷಯಗಳಲ್ಲಿ ಪ್ರವೇಶಾತಿ ಪರೀಕ್ಷೆ ಮೇ 4ರಂದು ಬೆಳಗ್ಗೆ 10ರಿಂದ 11.30 ವರೆಗೆ ಆಯಾ ತಾಂತ್ರಿಕ ಪ್ರೌಢಶಾಲೆಗಳಲ್ಲಿ ನಡೆಯಲಿದೆ. ತಾಂತ್ರಿಕ ಪ್ರೌಢಶಾಲೆಗಳ ವಿದ್ಯಾರ್ಥಿ ಗಳಿಗೆ ರಾಜ್ಯದ ಪಾಲಿಟೆಕ್ನಿಕ್ ಕಾಲೇಜುಗಳ ಪ್ರೌಏಶಾತಿಗೆ ಶೇ 10 ಸೀಟುಗಳು ಮೀಸಲಾತಿ ಇದೆ. ಹೆಚ್ಚುವರಿ ಮಾಹಿತಿಗೆ : www.polyadmission.org/ths