ತಿರುವನಂತಪುರ : ರಾಜ್ಯದಲ್ಲಿ ಇಂದು 35,013 ಮಂದಿ ಜನರಿಗೆ ಕೋಡ್ ಖಚಿತಪಡಿಸಲಾಗಿದ್ದು, ತೀವ್ರ ಕಳವಳ ಮೂಡಿಸಿದೆ. ಜೊತೆಗೆ ಇದೇ ಮೊದಲ ಬಾರಿಗೆ ಎಂಬಂತೆ 41 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಇದು ದೈನಂದಿನ ಗರಿಷ್ಠ ಎರಿಕೆಯಾಗಿದೆ. ಸೋಂಕು ಹರಡುವುದು ತೀವ್ರಗೊಳ್ಳುತ್ತಿದೆ ಎಂದು ಸಿಎಂ ಕಳವಳ ವ್ಯಕ್ತಪಡಿಸಿರುವರು. ಜನಸಂದಣಿ ಮತ್ತು ಗುಂಪುಗೂಡುವುದನ್ನು ಕಟ್ಟುನಿಟ್ಟಾಗಿ ನಿವಾರಿಸುವತ್ತ ಜನರು ಮನಮಾಡಬೇಕೆಂದು ಅವರು ವಿನಂತಿಸಿದ್ದಾರೆ.
ಇಂದು ಎರ್ನಾಕುಳಂ 5287, ಕೋಝಿಕೋಡ್ 4317, ತ್ರಿಶೂರ್ 4107, ಮಲಪ್ಪುರಂ 3684, ತಿರುವನಂತಪುರ 3210, ಕೊಟ್ಟಾಯಂ 2917, ಆಲಪ್ಪುಳ 2235, ಪಾಲಕ್ಕಾಡ್ 1920, ಕಣ್ಣೂರು 1857, ಕೊಲ್ಲಂ 1422, ಇಡುಕ್ಕಿ 1251, ಪತ್ತನಂತಿಟ್ಟು 1202, ಕಾಸರಗೋಡು 872 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 1,38,190 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ.25.34 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,54,92,489 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ನಿಂದ ಆಗಮಿಸಿದ ಯಾರಿಗೂ ಸೋಂಕು ದೃಢಪಟ್ಟಿಲ್ಲ. ಯುಕೆ (108), ದಕ್ಷಿಣ ಆಫ್ರಿಕಾ (7) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 116 ಮಂದಿ ಜನರಿಗೆ ಈವರೆಗೆ ಸೋಂಕು ದೃಢಪಡಿಸಲಾಗಿದೆ. ಈ ಪೈಕಿ 112 ಮಂದಿಗೆ ನೆಗೆಟಿವ್ ಆಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 41 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 5211 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 275 ಮಂದಿ ಜನರು ರಾಜ್ಯದ ಹೊರಗಿಂದ ಬಂದÀವರು. ಸಂಪರ್ಕದ ಮೂಲಕ 32,474 ಮಂದಿ ಜನರಿಗೆ ಸೋಂಕು ತಗಲಿತು. 2167 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಳಂ 5204, ಕೋಝಿಕೋಡ್ 4190, ತ್ರಿಶೂರ್ 4060, ಮಲಪ್ಪುರಂ 3549, ತಿರುವನಂತಪುರ 2807, ಕೊಟ್ಟಾಯಂ 2698, ಆಲಪ್ಪುಳ 2226, ಪಾಲಕ್ಕಾಡ್ 835, ಕಣ್ಣೂರು 1667, ಕೊಲ್ಲಂ 1401, ಇಡುಕ್ಕಿ 1170, ಪತ್ತನಂತಿಟ್ಟು 1136, ಕಾಸರಗೋಡು 828, ವಯನಾಡ್ 703 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು 97 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ. ಕಣ್ಣೂರು 29, ತ್ರಿಶೂರ್ 15, ಪಾಲಕ್ಕಾಡ್, ಕಾಸರಗೋಡು 11, ಕೊಲ್ಲಂ 9, ವಯನಾಡ್ 7, ಪತ್ತನಂತಿಟ್ಟು 5, ಕೊಟ್ಟಾಯಂ 3, ತಿರುವನಂತಪುರ, ಎರ್ನಾಕುಳಂ, ಮಲಪ್ಪುರಂ 2 ಮತ್ತು ಇಡುಕಿ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಲ್ಪಟ್ಟಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 15,505 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 1154, ಕೊಲ್ಲಂ 1741, ಪತ್ತನಂತಿಟ್ಟು 688, ಆಲಪ್ಪುಳ 697, ಕೊಟ್ಟಾಯಂ 4285, ಇಡುಕ್ಕಿ 210, ಎರ್ನಾಕುಳಂ 1012, ತ್ರಿಶೂರ್ 1152, ಪಾಲಕ್ಕಾಡ್ 517, ಮಲಪ್ಪುರಂ 721, ಕೋಝಿಕೋಡ್ 1487, ವಯನಾಡ್ 278, ಕಣ್ಣೂರು 741, ಕಾಸರಗೋಡು 822 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 2,66,646 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 12,23,185 ಮಂದಿ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 5,51,133 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 5,28,407 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 22,726 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಒಟ್ಟು 4436 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು 11 ಹೊಸ ಹಾಟ್‍ಸ್ಪಾಟ್‍ಗಳಿವೆ. 2 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 597 ಹಾಟ್‍ಸ್ಪಾಟ್‍ಗಳಿವೆ.