ತಿರುವನಂತಪುರ: ರಾಜ್ಯದಲ್ಲಿ ಇಂದು 3502 ಮಂದಿ ಜನರಿಗೆ ಕೋವಿಡ್ -19 ಖಚಿತಪಡಿಸಲಾಗಿದೆ. ಕೋಝಿಕೋಡ್ 550, ಎರ್ನಾಕುಳಂ 504, ತಿರುವನಂತಪುರ 330, ಕೊಟ್ಟಾಯಂ 300, ಕಣ್ಣೂರು 287, ತ್ರಿಶೂರ್ 280, ಮಲಪ್ಪುರಂ 276, ಕೊಲ್ಲಂ 247, ಪಾಲಕ್ಕಾಡ್ 170, ಆಲಪ್ಪುಳ 157, ಕಾಸರಗೋಡು 116, ಪತ್ತನಂತಿಟ್ಟು 111, ಇಡುಕ್ಕಿ 92, ವಯನಾಡ್ 82 ಎಂಬಂತೆ ಸೋಂಕು ಪತ್ತೆಹಚ್ಚಲಾಗಿದೆ.
ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ಗಳಿಂದ ಬಂದ ಯಾರಿಗೂ ಕೋವಿಡ್ ಖಚಿತಪಡಿಸಿಲ್ಲ.ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಟ್ಟ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 60,554 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ.5.78 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ. ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,35,14,740 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 16 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 4710 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 131 ಜನರು ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 3097 ಮಂದಿ ಜನರಿಗೆ ಸೋಂಕು ತಗಲಿತು. 258 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋಝಿಕೋಡ್ 530, ಎರ್ನಾಕುಳಂ 488, ತಿರುವನಂತಪುರ 228, ಕೊಟ್ಟಾಯಂ 279, ಕಣ್ಣೂರು 227, ತ್ರಿಶೂರ್ 268, ಮಲಪ್ಪುರಂ 263, ಕೊಲ್ಲಂ 234, ಪಾಲಕ್ಕಾಡ್ 73, ಆಲಪ್ಪುಳ 148, ಕಾಸರಗೋಡು 103, ಪತ್ತನಂತಿಟ್ಟು 95,ಇಡುಕ್ಕಿ 87, ವಯನಾಡ್ 74 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು ಹದಿನಾರು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿರುವುದು ದೃಢಪಡಿಸಲಾಗಿದೆ. ಕಣ್ಣೂರು 5, ತ್ರಿಶೂರ್ 3, ಪಾಲಕ್ಕಾಡ್ ಮತ್ತು ಕಾಸರಗೋಡು ತಲಾ 2, ಕೊಲ್ಲಂ, ಇಡುಕ್ಕಿ, ಎರ್ನಾಕುಳಂ ಮತ್ತು ಕೋಝಿಕೋಡ್ ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಕಂಡುಬಂದಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 1955 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 174, ಕೊಲ್ಲಂ 117, ಪತ್ತನಂತಿಟ್ಟು 70, ಆಲಪ್ಪುಳ 139, ಕೊಟ್ಟಾಯಂ 230, ಇಡುಕ್ಕಿ 31, ಎರ್ನಾಕುಳಂ 125, ತ್ರಿಶೂರ್ 175, ಪಾಲಕ್ಕಾಡ್ 69, ಮಲಪ್ಪುರಂ 260, ಕೊಝಿಕೋಡ್ 273, ವಯನಾಡ್ 48, ಕಣ್ಣೂರು 169, ಕಾಸರಗೋಡು 75 ಎಂಬಂತೆ ಪರೀಕ್ಷೆಗಳಲ್ಲಿ ನೆಗೆಟಿವ್ ಆದವರ ಮಾಹಿತಿಗಳಾಗಿವೆ. ಇದರೊಂದಿಗೆ 31,493 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 11,08,078 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,52,136 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,47,208 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 4,928 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಒಟ್ಟು 796 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು 3 ಹೊಸ ಹಾಟ್‍ಸ್ಪಾಟ್‍ಗಳಿವೆ. 4 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ರಾಜ್ಯಾದ್ಯಂತ ಪ್ರಸ್ತುತ ಒಟ್ಟು 361 ಹಾಟ್‍ಸ್ಪಾಟ್‍ಗಳಿವೆ.