ತಿರುವನಂತಪುರ: ಕೇರಳದಲ್ಲಿ ಇಂದು 38,607 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಎರ್ನಾಕುಳಂ 5369, ಕೋಝಿಕೋಡ್ 4990, ತ್ರಿಶೂರ್ 3954, ತಿರುವನಂತಪುರ 3940, ಮಲಪ್ಪುರಂ 3857, ಕೊಟ್ಟಾಯಂ 3616, ಪಾಲಕ್ಕಾಡ್ 2411, ಕೊಲ್ಲಂ 2058, ಆಲಪ್ಪುಳ 2043, ಕಣ್ಣೂರು 1999, ಪತ್ತನಂತಿಟ್ಟು 1245, ಇಡುಕ್ಕಿ 1153, ಕಾಸರಗೋಡು 1063, ವಯನಾಡು 909 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 1,57,548 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ.24.5 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ. ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,56,50,037 Àಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ನಿಂದ ಆಗಮಿಸಿದ ಯಾರಿಗೂ ಕೋವಿಡ್ ಖಚಿತಪಡಿಸಿಲ್ಲ. ಯುಕೆ (108), ದಕ್ಷಿಣ ಆಫ್ರಿಕಾ (7) ಮತ್ತು ಬ್ರೆಜಿಲ್ (1) ನಿಂದ ಆಗಮಿಸಿದ 116 ಮಂದಿ ಜನರಿಗೆ ಈವರೆಗೆ ಸೋಂಕು ದೃಢಪಟ್ಟಿದ್ದು, ಈ ಪೈಕಿ 112 ಮಂದಿಗೆ ನೆಗೆಟಿವ್ ಆಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 48 ಮಂದಿ ಸೋಂಕು ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 5,259 ಕ್ಕೆ ಏರಿಕೆಯಾಗಿದೆ.
ಇಂದು, ಸೋ|ಂಕು ಪತ್ತೆಯಾದವರಲ್ಲಿ 300 ಮಂದಿ ರಾಜ್ಯದ ಹೊರಗಿಂದ ಬಂದÀವರು. ಸಂಪರ್ಕದ ಮೂಲಕ 35,577 ಮಂದಿ ಜನರಿಗೆ ಸೋಂಕು ತಗುಲಿತು. 2620 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಲಂ 5217, ಕೋಝಿಕೋಡ್ 4811, ತ್ರಿಶೂರ್ 3922, ತಿರುವನಂತಪುರ 3439, ಮಲಪ್ಪುರಂ 3648, ಕೊಟ್ಟಾಯಂ 3211, ಪಾಲಕ್ಕಾಡ್ 1239, ಕೊಲ್ಲಂ 2050, ಆಲಪ್ಪುಳ 2033, ಕಣ್ಣೂರು 1813, ಪತ್ತನಂತಿಟ್ಟು 1160, ಇಡುಕ್ಕಿ 1121, ಕಾಸರಗೋಡು 1025, ವಯನಾಡ್ 888 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು 110 ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ. ಕಣ್ಣೂರು 21, ಕೊಟ್ಟಾಯಂ 14, ತಿರುವನಂತಪುರ 12, ಕಾಸರಗೋಡು 11, ಪತ್ತನಂತಿಟ್ಟು, ಪಾಲಕ್ಕಾಡ್, ವಯನಾಡ್ ತಲಾ 10, ಎರ್ನಾಕುಳಂ, ತ್ರಿಶೂರ್ ತಲಾ 5, ಮಲಪ್ಪುರಂ 4, ಕೊಲ್ಲಂ, ಕೋಝಿಕೋಡ್ 3 ಮತ್ತು ಇಡುಕಿ 2 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 21,116 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 1572, ಕೊಲ್ಲಂ 1384, ಪತ್ತನಂತಿಟ್ಟು 611, ಆಲಪ್ಪುಳ 1853, ಕೊಟ್ಟಾಯಂ 6137, ಇಡುಕ್ಕಿ 349, ಎರ್ನಾಕುಳಂ 1293, ತ್ರಿಶೂರ್ 1361, ಪಾಲಕ್ಕಾಡ್ 931, ಮಲಪ್ಪುರಂ 999, ಕೊಝಿಕ್ಕೋಡ್ 2577, ವಯನಾಡ್ 305, ಕಣ್ಣೂರು 1045, ಕಾಸರಗೋಡು 699 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ, 2,84,086 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 12,44,301 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 5,93,840 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 5,69,831 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 24,009 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 4423 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು 19 ಹೊಸ ಹಾಟ್‍ಸ್ಪಾಟ್‍ಗಳಿವೆ. ಯಾವುದೇ ಪ್ರದೇಶವನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿಲ್ಲ. ಪ್ರಸ್ತುತ ಒಟ್ಟು 616 ಹಾಟ್‍ಸ್ಪಾಟ್‍ಗಳಿವೆ.