ನವದೆಹಲಿ: ದೇಶಾದ್ಯಂತ ಭಾನುವಾರದಿಂದ ಕೊರೋನಾ ಲಸಿಕೆ ಉತ್ಸವ ಆರಂಭವಾಗಲಿದೆ. ಹಲವು ರಾಜ್ಯಗಳಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದು, ಕೊರೋನಾ ೨ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ 4 ದಿನಗಳ ಈ ಲಸಿಕಾ ಉತ್ಸವ ಆರಂಭಿಸಿದ್ದಾರೆ. ಈ ಮೂಲಕ ಎಲ್ಲಾ ರಾಜ್ಯಗಳಲ್ಲಿ ಲಸಿಕೆ ನೀಡುವ ಅಭಿಯಾನವನ್ನು ತೀವ್ರಗೊಳಿಸಲು ಅವರು ಕರೆ ಕೊಟ್ಟಿದ್ದಾರೆ.
ಇದೇ 14ರವರೆಗೆ ಲಸಿಕೆ ಉತ್ಸವ ನಡೆಯಲಿದ್ದು, ಸಾರ್ವಜನಿಕರು ಲಸಿಕೆ ಹಾಕಿಸಿಕೊಂಡು, ಸೋಂಕನ್ನು ನಿಯಂತ್ರಿಸಲು ಮುಂದಾಗಬೇಕು ಎಂದು ಪ್ರಧಾನಿ ಹೇಳಿದ್ದಾರೆ.
ದೇಶಾದ್ಯಂತ ನಾವು 'ಟಿಕಾ ಉತ್ಸವವನ್ನು ಆರಂಭಿಸುತ್ತಿದ್ದೇವೆ. ದೇಶದ ಜನರು 4 ವಿಷಯಗಳಿಗೆ ಬದ್ಧರಾಗಿ ಎಂದು ಕೇಳಿಕೊಳ್ಳುತ್ತೇನೆ. ಲಸಿಕೆ ಪಡೆಯಲು ಸಹಾಯ ಮಾಡುವವರಿಗೆ ಸಹಾಯ ಮಾಡಿ, ಕೋವಿಡ್ ಚಿಕಿತ್ಸೆಯಲ್ಲಿ ಜನರಿಗೆ ಸಹಾಯ ಮಾಡಿ, ಮಾಸ್ಕ್ ಧರಿಸಿ ಮತ್ತು ಇತರರನ್ನು ಧರಿಸುವಂತೆ ಪ್ರೇರೇಪಿಸಿ ಮತ್ತು ಯಾರಿಗಾದರೂ ಸೋಂಕು ತಗುಲಿದರೆ ಆ ಪ್ರದೇಶದಲ್ಲಿ ಸೂಕ್ಷ್ಮ ಕಂಟೈನ್ ಮೆಂಟ್ ವಲಯವೆಂದು ಸೃಷ್ಟಿ ಮಾಡಿ ಎಂದು ಪ್ರಧಾನಿ ಹೇಳಿದ್ದಾರೆ.
https://t.co/8zXZ0bqYgl?amp=1