ತಿರುವನಂತಪುರ: ಕೋವಿಡ್ ವ್ಯಾಪಕಗೊಂಡಿರುವ ರಾಜ್ಯದ ಜಿಲ್ಲೆಗಲಲ್ಲ್ಲಿ ಸಂಪೂರ್ಣ ಲಾಕ್ ಡೌನ್ ಹೇರುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೇ 4 ರಿಂದ ಕಠಿಣ ನಿರ್ಬಂಧ ಹೇರಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಯಮಗಳಂತೆ ಅಗತ್ಯ ಸೇವೆಗಳಿಗೆ ಮಾತ್ರ ಸೀಮಿತವಾಗಿರಬೇಕು ಎಂದು ಸಿಎಂ ಹೇಳಿದರು.
ಹೋಟೆಲ್‍ಗಳಿಗೆ ಪಾರ್ಸೆಲ್‍ಗಳನ್ನು ಮಾತ್ರ ಅನುಮತಿಸಲಾಗುತ್ತವೆ. ಮನೆ ವಿತರಣೆಯನ್ನು(ಡೋರ್ ಡೆಲಿವರಿ) ಅನುಮತಿಸಲಾಗುವುದು. ರೈಲು ಮತ್ತು ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ತೊಂದರೆಗಳಿರುವುದಿಲ್ಲ. ಚುನಾವಣಾ ಗೆಲುವಿನ ಹಿನ್ನೆಲೆಯಲ್ಲಿ ಎಲ್ಲೂ ವಿಜಯೋತ್ಸವದಂತಹ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ಇರುವುದಿಲ್ಲ ಎಂದು ಸಿಎಂ ಹೇಳಿದರು.
ಬ್ಯಾಂಕುಗಳು ಗರಿಷ್ಠ ಆನ್‍ಲೈನ್ ವಹಿವಾಟುಗಳನ್ನು ಪೆÇ್ರೀತ್ಸಾಹಿಸಬೇಕು. ಯಾವುದೇ ಕಾರಣಕ್ಕೂ ಜನಸಂದಣಿಗೆ ಅವಕಾಶ ಇರಬಾರದು. ಮದುವೆಗೆ 50 ಮಂದಿ ಮತ್ತು ಮರಣಾನಂತರದ ವಿಧಿವಿಧಾನಗಳಿಗೆ 20 ಜನರಿಗೆ ಮಾತ್ರ ಅವಕಾಶವಿರುವುದು. ಆರಾಧನಾಲಯಗಳಲ್ಲಿ ಗರಿಷ್ಠ 50 ಮಂದಿ ಮಾತ್ರ ಪಾಲ್ಗೊಳ್ಳಬಹುದು. ಸಾಧ್ಯವಾದರೆ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂದು ಸಿಎಂ ಹೇಳಿದರು.