ಕಾಸರಗೋಡು: ವಿಧಾನಸಭೆ ಚುನಾವಣೆ ಅಂಗವಾಗಿ ಮತಎಣಿಕೆ ಮೇ 2ರಂದು ನಡೆಯಲಿದ್ದು, ಕಾಸರಗೋಡು ಜಿಲ್ಲೆಯಲ್ಲಿ 5 ಮತಎಣಿಕೆ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ.ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಮತಎಣಿಕೆ ಕೇಂದ್ರ ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ,ಕಾಸರಗೋಡು ವಿಧಾನಸಭೆ ಕ್ಷೇತ್ರದ ಕೇಂದ್ರ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ, ಉದುಮಾ ವಿಧಾನಸಭೆ ಕ್ಷೇತ್ರದ ಕೇಂದ್ರ ಪೆರಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ, ತ್ರಿಕರಿಪುರ ವಿಧಾನಸಭೆ ಕ್ಷೇತ್ರದ ಮತಎಣಿಕೆ ಕೇಂದ್ರ ತ್ರಿಕರಿಪುರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿರಲಿದೆ.
ಕೇಂದ್ರವೊಂದರಲ್ಲಿ ತಲಾ 4 ಸಭಾಂಗಣಗಳನ್ನು ಮತ ಎಣಿಕೆಗಾಗಿ ಸಜ್ಜುಗೊಳಿಸಲಾಗುವುದು. ಸಭಾಂಗಣವೊಂದರಲ್ಲಿ 7 ಮೇಜುಗಳು ಮತಎಣಿಕೆಗಾಗಿ ಇರಲಿದೆ. ಅಂಚೆ ಬ್ಯಾಲೆಟ್‍ಗಳಿಗೆ ಪ್ರತ್ಯೇಕ ಕೌಂಟಿಂಗ್ ಹಾಲ್ ಇರುವುದು. ಮೇ 2ರಂದು ಬೆಳಗ್ಗೆ 8 ಗಂಟೆಗೆ ಮತಎಣಿಕೆ ಆರಂಭಗೊಳ್ಳಲಿದೆ. ಚುನಾವಣೆ ಅಧಿಕಾರಿ ಅವರಹೊಣೆಗಾರಿಕೆಯಲ್ಲಿ ಮತಎಣಿಕೆ ಜರುಗಲಿದೆ. ಪ್ರತಿ ಸುತ್ತಿನ ಮತಎಣಿಕೆ ಫಲಿತಾಂಶವನ್ನು ಚುನಾವಣೆ ಅಧಿಕಾರಿ ಪ್ರಕಟಿಸಿದರೆ, ಅದುನೇರವಾಗಿ ವೆಬ್ ಸೈಟ್ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವ ರೀತಿ ಸಜ್ಜೀಕರಣ ನಡೆಸಲಾಗಿದೆ.
ಎಂಬ ಇಲೆಕ್ಷನ್ ರಿಸಲ್ಟ್ ಪೋರ್ಟಲ್ ಮೂಲಕ ಫಲಿತಾಂಶ ದೊರೆಯಲಿದೆ. ವೋಟರ್ ಹೆಲ್ಪ್ ಲೈನ್‍ಆಪ್ ನಲ್ಲೂ ಫಲಿತಾಂಶ ಲಭಿಸುವುದು. ಮತಎಣಿಕೆಯ ಪೂರ್ವಭಾವಿಯಾಗಿ ಆನ್ ಲೈನ್ ಸಜ್ಜೀಕರಣ ಅವಲೋಕನ, ಸಿಬ್ಬಂದಿಗೆ ತರಬೇತಿ ಸಂಬಂಧ ಡ್ರೈ ರನ್ ಮತ್ತು ಡ್ರಸ್ ರಿಹರ್ಸಲ್ ನಡೆಸಲಾಗುವುದು. ಮತಎಣಿಕೆ ಸಂಬಂಧ ಚುನಾವಣಾ ಆಯೋಗ ರಾಜ್ಯದ ಎಲ್ಲ ಸಿಬ್ಬಂದಿಗೆ ಆನ್‍ಲೈನ್‍ತರಬೇತಿ ನೀಡಿದೆ. ಕಾಸರಗೋಡು ಜಿಲ್ಲೆಯ 5 ವಿಧಾನಸಭೆ ಕ್ಷೇತ್ರಗಳ ಸಿಬ್ಬಂದಿ ಇದರಲ್ಲಿ ಒಳಗೊಂಡಿದ್ದಾರೆ.