ತಿರುವನಂತಪುರ: ಕೊರೋನದ ಸಂದರ್ಭದಲ್ಲಿ ಕೇರಳದಲ್ಲಿ ಚುನಾವಣಾ ಮತ ನೀಡುವಿಕೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಕಡಿಮೆಯಾಗಿಲ್ಲ. ಮಧ್ಯಾಹ್ನದ ಹೊತ್ತಿಗೆ ರಾಜ್ಯದಲ್ಲಿ ಮತದಾನ ಶೇಕಡಾ 50 ದಾಟಿದೆ. ತಿರುವನಂತಪುರ ಜಿಲ್ಲೆಯ ಕಳಕೂಟಂ, ಕಣ್ಣೂರು ಮತ್ತು ಕೋಝಿಕೋಡ್ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಕಳಕೂಟ್ಟಂ ನಲ್ಲಿ ಶೇ 46.74, ಕಣ್ಣೂರು ಶೇ 53.21 ಮತ್ತು ಕೋಝಿಕೋಡ್ ಶೇ .50.10 ರಷ್ಟು ಮತದಾನ ದಾಖಲಿಸಿದೆ.
ಕಣ್ಣೂರಿನಲ್ಲಿ ಮಧ್ಯಾಹ್ನದ ವೇಳೆಗೆ ಶೇ 53.21 ರಷ್ಟು ಮತದಾನವಾಗಿತ್ತು. ಕಣ್ಣೂರಿನ ಹೆಚ್ಚಿನ ಕ್ಷೇತ್ರಗಳಲ್ಲಿ ಮತದಾನ ಶೇಕಡಾ 60 ಕ್ಕೆ ಹತ್ತಿರದಲ್ಲಿದೆ. ತಿರುವನಂತಪುರ ಶೇ 44.52, ಕೊಲ್ಲಂ 41. 61, ಪತ್ತನಂತಿಟ್ಟು 46.43, ಆಲಪ್ಪುಳ 49.16, ಕೊಟ್ಟಾಯಂ 47.91, ಇಡುಕ್ಕಿ 45.52, ಎರ್ನಾಕುಳಂ 50.11, ತ್ರಿಶೂರ್ 50.20, ಪಾಲಕ್ಕಾಡ್ 52. 14 , ಮಲಪ್ಪುರಂ 46.19, ಕೋಝಿಕ್ಕೋಡ್ 50.10, ವಯನಾಡ್ 48.67, ಕಾಸರಗೋಡಲ್ಲಿ ಮಧ್ಯಾಹ್ನ 2ರ ವರೆಗೆ 48.16 ಶೇ. ಮತದಾನ ನಡೆದಿದೆ.