ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 50,000 ಕ್ಕೆ ಏರಿಕೆಯಾಗಬಹುದು ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಸೂಚನೆ ನೀಡಿದ್ದಾರೆ. ಮುಂದಿನ ಎರಡು ವಾರಗಳಲ್ಲಿ ಸೋಂಕಿನ ವೇಗ ಕಡಿಮೆಯಾಗುತ್ತದೆ ಮತ್ತು ತಪಾಸಣೆ ತೀವ್ರಗೊಳ್ಳುತ್ತದೆ ಎಂದು ಅವರು ಆಶಿಸಿದರು.
ಕೋವಿಡ್ ಗುಂಪು ಪರೀಕ್ಷೆಯು ಅವೈಜ್ಞಾನಿಕ ಎಂದು ಸರ್ಕಾರಿ ವೈದ್ಯರ ಟೀಕೆಗೆ ಆರೋಗ್ಯ ಸಚಿವರು ಪ್ರತಿಕ್ರಿಯಿಸಿದರು. ಗುಂಪು ಪರೀಕ್ಷೆ ಪ್ರತಿದಿನವೂ ಇರುವುದಿಲ್ಲ. ತಜ್ಞರು ಮತ್ತು ಜನರ ಅಭಿಪ್ರಾಯದ ಮೇರೆಗೆ ಗುಂಪು ತಪಾಸಣೆ ನಡೆಸಲಾಗುತ್ತಿದೆ ಎಂದರು.
ಕೇಂದ್ರವನ್ನು ಟೀಕಿಸಿದ ಸಚಿವೆ, ಬೇಡಿಕೆ ಇರಿಸಿದಷ್ಟು ವ್ಯಾಕ್ಸಿನೇಷನ್ ಡೋಸ್ ಕಳಿಸಿದರೆ ಮಾತ್ರ ಲಸಿಕೆ ವಿತರಣೆ ಮಾಡಲಾಗುವುದು. ಲಸಿಕೆ ಲಭ್ಯತೆಯನ್ನು ಕೇಂದ್ರವು ಖಚಿತಪಡಿಸಿಕೊಳ್ಳಬೇಕು. ಖಾಸಗಿ ವಲಯದಲ್ಲಿ ಬೆಲೆಗಳನ್ನು ಇಳಿಸಲು ಕೇಂದ್ರವೂ ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಇಂದು ಕೇರಳದಲ್ಲಿ ನಡೆಯುವ ಟೆಸ್ಟ್ ಭಾರತದಲ್ಲಿ ಅತಿ ದೊಡ್ಡದಾಗಿದೆ. ಟೆಸ್ಟ್ ಪರ್ ಮಿಲಿಯನ್ ನಲ್ಲಿ ಕೇರಳ 3.5 ಲಕ್ಷ ತಲುಪಿದೆ. ಭಾರತದಲ್ಲಿ ಸರಾಸರಿ ಒಂದೂವರೆ ಲಕ್ಷ ಪರೀಕ್ಷೆಗಳು ನಡೆಯುತ್ತವೆ. ಪರೀಕ್ಷೆಯನ್ನು ಹೆಚ್ಚಿಸಲು ಎಲ್ಲರಿಗೂ ಸೂಚಿಸಲಾಗಿದೆ. ಸಾವಿರಾರು ಮಾದರಿಗಳನ್ನು ಏಕಕಾಲದಲ್ಲಿ ತೆಗೆದುಕೊಂಡು ಪರೀಕ್ಷಿಸುವುದು ಕಷ್ಟ ಎಂದು ಸಚಿವೆ ತಿಳಿಸಿದರು.
ಕೆಲವೊಮ್ಮೆ ಫಲಿತಾಂಶವು ಎರಡು ದಿನ ವಿಳಂಬವಾಗಬಹುದು. ಬುಧವಾರ ಹೆಚ್ಚಿನ ಮಾದರಿಗಳನ್ನು ತೆಗೆದುಕೊಂಡಿರುವ ಕಾರಣ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿದೆ. ಆದರೆ ಇನ್ನೂ ಸಕಾರಾತ್ಮಕ ದರವು 20-22 ಶೇಕಡಾ ಆಗಿದೆ. ಕೆಲವು ಸ್ಥಳಗಳಲ್ಲಿ ಇದು ಶೇಕಡಾ ನಲವತ್ತಕ್ಕಿಂತ ಹೆಚ್ಚಾಗಿದೆ. ಅಂತಲ್ಲಿಗೆ ತೆರಳದೆ ಸಾಧ್ಯವಿದ್ದಷ್ಟೂ ಮನೆಗಳಲ್ಲೇ ಜನರು ಉಳಿದುಕೊಳ್ಳಲು ಗಂಭೀರವಾಗಿ ಯೋಚಿಸಬೇಕು ಎಂದು ಅವರು ಹೇಳಿದರು.