ತಿರುವನಂತಪುರ: ಎಸ್ಎ ಎಸ್‌ಎಲ್‌ಸಿ-ಐಟಿ ಪರೀಕ್ಷೆ ಮೇ 5 ರಿಂದ ಪ್ರಾರಂಭವಾಗಲಿದೆ. ಕೋವಿಡ್ ನೀತಿ ಸಂಹಿತೆ ಅನುಸಾರವಾಗಿ ಪರೀಕ್ಷೆಯನ್ನು ನಡೆಸಲಾಗುವುದು. ಪರೀಕ್ಷೆಗೆ ಸಂಬಂಧಿಸಿ ಪರೀಕ್ಷಾ ಕಾರ್ಯದರ್ಶಿಗಳು ಪರೀಕ್ಷೆಯ ನಡವಳಿಕೆಗಳ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.
ವಿದ್ಯಾರ್ಥಿಗಳು ಲ್ಯಾಬ್ ಗೆ ತೆರಳುವಾಗ ಮತ್ತು ಪರೀಕ್ಷೆ ಬರೆದು ಲ್ಯಾಬ್ ನಿಂದ ಮರಳುವಾಗ ಅಣುಮುಕ್ತತೆಗಾಗಿ ಸ್ವಚ್ಚತೆ ನಿಖರಪಡಿಸಬೇಕು. ಇದಕ್ಕಾಗಿ ವ್ಯವಸ್ಥೆಗಳನ್ನು ಮುಖ್ಯ ಅಧೀಕ್ಷಕರು ಮಾಡಬೇಕು. ವಿದ್ಯಾರ್ಥಿಗಳಿಗೆ ಅರ್ಧ ಗಂಟೆಗಳ ಪರೀಕ್ಷಾ ಸಮಯ ನಿಗದಿಪಡಿಸಲಾಗಿದೆ.