ಕಾಸರಗೋಡು: ಆತಂಕಕಾರಿಯಾದ ಬೆಳವಣಿಗೆಯಲ್ಲಿ ಕೋವಿಡ್ ಭಾನುವಾರದ ವರದಿ ಗಡಿನಾಡಿನ ತಲ್ಲಣಕ್ಕೆ ಕಾರಣವಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 622 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 162 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ನಿಗಾ:
ಕಾಸರಗೊಡು ಜಿಲ್ಲೆಯಲ್ಲಿ 9660 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ ಮನೆಗಳಲ್ಲಿ 8990 ಮಂದಿ, ಸಾಂಸ್ಥಿಕವಾಗಿ 670 ಮಂದಿ ನಿಗಾದಲ್ಲಿರುವರು. ನೂತನವಾಗಿ 811 ಮಂದಿ ನಿಗಾ ಪ್ರವೇಶಿಸಿದ್ದಾರೆ. 1090 ಮಂದಿ ಭಾನುವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ನೂತನವಾಗಿ 2737 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 911 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ಒಟ್ಟು ಗಣನೆ :
ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 37372 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ವರೆಗೆ ಒಟ್ಟು 32968 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಸದ್ರಿ 4064 ಮಂದಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಸರ್‍ಗೋಡ್ ಜಿಲ್ಲೆಯಲ್ಲಿ 622 ಜನರನ್ನು ಗುಣಪಡಿಸಲಾಗಿದ್ದು, 162 ಜನರನ್ನು ಗುಣಪಡಿಸಲಾಗಿದೆ. ಜಿಲ್ಲೆಯಲ್ಲಿ 9660 ಜನರು ನಿರೀಕ್ಷಣೆಯಲ್ಲಿದ್ದಾರೆ.
ಕೋವಿಡ್ ಧನಾತ್ಮಕ ಪ್ರಕರಣಗಳು:
ಅಜನೂರ್: 21, ಬದಿಯಡ್ಕ: 7, ಬಳಾಲ್: 6, ಬೇಡಡ್ಕ: 19, ಬೆಳ್ಳೂರು: 2, ಚೆಮ್ಮನಾಡ್: 21, ಚೆಂಗಳ: 35, ಚೆರ್ವತ್ತೂರ್: 34, ಈಸ್ಟ್ ಎಳೇರಿ: 23, ಎಣ್ಮಕಜೆ: : 2, ಕಳ್ಳಾರ್: 15, ಕಾಞಂಗಾಡ್: 69, ಕಾರಡ್ಕ: 8, ಕಾಸರಗೋಡು: 15, ಕೈಯೂರ್-ಚೀಮೆನಿ: 17, ಕಿನಾನೂರ್-ಕರಿಂದಳ: 6, ಕೋಡೋಂ ಬೆಳ್ಳೂರು: 27, ಕುಂಬ್ಡಾಜೆ: 1, ಕುಂಬಳೆÀ: 2, ಕುತ್ತಿಕೋಲ್: 3, ಮಧೂರು: 13, ಮಡಿಕೈ: 39, ಮಂಗಲ್ಪಾಡಿ: 6, ಮಂಜೇಶ್ವರ: 5, ಮೊಗ್ರಾಲ್ ಪುತ್ತೂರು: 5, ಮೀಂಜ: 1, ಮುಳಿಯಾರ್: 10, ನಿಲೇಶ್ವರ: 34, ಪಡನ್ನ: 18, ಪೈವಳಿಕೆ: 2, ಪಳ್ಳಿಕ್ಕೆರೆ: 34, ಪನತ್ತಡಿ: 2, ಪೆರ್ಲ: 1, ಪಿಲಿಕೋಡ್: 14, ಪುಲ್ಲೂರ್-ಪೆರಿಯಾ: 28, ಪುತ್ತಿಗೆ 1, ತ್ರಿಕ್ಕರಿಪುರ: 30, ಉದುಮ: 30, ವಲಿಯಪರಂಬ: 10, ವರ್ಕಾಡಿ: 1, ವೆಸ್ಟ್ ಎಳೇÉರಿ: 4 , ಇತರ ಜಿಲ್ಲೆಗಳು: ಕರಿವೆಳ್ಳೂರ್-ಪೆರಲಂ: 1 ಎಂಬಂತೆ ಪಾಸಿಟಿವ್ ಆಗಿದೆ.