HEALTH TIPS

ಪರಿಸ್ಥಿತಿ ಅತಿಸೂಕ್ಷ್ಮ: ರಾಜ್ಯದಲ್ಲಿ ಇಂದು 6986 ಮಂದಿಗೆ ಕೋವಿಡ್: ಸಂಪರ್ಕದ ಮೂಲಕ 6258 ಮಂದಿಗೆ ಸೋಂಕು

                                                     

             ತಿರುವನಂತಪುರ: ರಾಜ್ಯದಲ್ಲಿ ಇಂದು 6986 ಮಂದಿ ಜನರಿಗೆ ಕೋವಿಡ್ -19 ಖಚಿತಪಡಿಸಲಾಗಿದೆ. ಕೋಝಿಕೋಡ್ 1271, ಎರ್ನಾಕುಳಂ 842, ಮಲಪ್ಪುರಂ 728, ಕೊಟ್ಟಾಯಂ 666, ಕಣ್ಣೂರು 575, ತಿರುವನಂತಪುರ 525, ತ್ರಿಶೂರ್ 423, ಆಲಪ್ಪುಳ 339, ಪಾಲಕ್ಕಾಡ್ 325, ಕೊಲ್ಲಂ 304, ಇಡುಕ್ಕಿ 291, ಕಾಸರಗೋಡು 251, ಪತ್ತನಂತಿಟ್ಟು 246, ವಯನಾಡ್ 200 ಎಂಬಂತೆ ಸೋಂಕು ಬಾಧಿಸಿದೆ.

             ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ಆಗಮಿಸಿದ ಯಾರಿಗೂ ಕೋವಿಡ್ ಕಂಡುಬಂದಿಲ್ಲ. ಯುಕೆ (103), ದಕ್ಷಿಣ ಆಫ್ರಿಕಾ (7) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 111 ಜನರಿಗೆ ಈವರೆಗೆ ಕೋವಿಡ್ ದೃಢಪಡಿಸಲಾಗಿದೆ. ಈ ಪೈಕಿ 107 ಮಂದಿಗೆ ನೆಗೆಟಿವ್ ಆಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.

           ಕಳೆದ 24 ಗಂಟೆಗಳಲ್ಲಿ 65,003 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ. 10.75 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,37,68,841 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

          ಕಳೆದ 24 ಗಂಟೆಗಳಲ್ಲಿ  16 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ.  ಒಟ್ಟು ಸಾವಿನ ಸಂಖ್ಯೆ 4783 ಕ್ಕೆ ಏರಿಕೆಯಾಗಿದೆ. 

     ಇಂದು, ಸೋಂಕು ಪತ್ತೆಯಾದವರಲ್ಲಿ 197 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 6258 ಮಂದಿ ಜನರಿಗೆ ಸೋಂಕು ತಗಲಿತು. 504 ಮಂದಿಯ  ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋಝಿಕೋಡ್ 1243, ಎರ್ನಾಕುಳಂ 809, ಮಲಪ್ಪುರಂ 695, ಕೊಟ್ಟಾಯಂ 601, ಕಣ್ಣೂರು 470, ತಿರುವನಂತಪುರ 381, ತ್ರಿಶೂರ್ 395, ಆಲಪ್ಪುಳ 338, ಪಾಲಕ್ಕಾಡ್ 135, ಕೊಲ್ಲಂ 298, ಇಡುಕ್ಕಿ 276, ಕಾಸರಗೋಡು 228, ಪತ್ತನಂತಿಟ್ಟು 205, ವಯನಾಡ್ 184 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ. 

            ಇಂದು 27 ಮಂದಿ  ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.  ಕಣ್ಣೂರು 6, ಎರ್ನಾಕುಳಂ 5, ತ್ರಿಶೂರ್ 4, ಕೋಝಿಕೋಡ್ 3, ತಿರುವನಂತಪುರ, ಇಡುಕಿ, ಕಾಸರಗೋಡು ತಲಾ 2, ಕೊಲ್ಲಂ, ಪತ್ತನಂತಿಟ್ಟ್ತು ಮತ್ತು ಪಾಲಕ್ಕಾಡ್ ತಲಾ 1 ಸೋಂಕು ಬಾಧಿಸಿದೆ. 

            ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 2358 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 130, ಕೊಲ್ಲಂ 208, ಪತ್ತನಂತಿಟ್ಟು 64, ಆಲಪ್ಪುಳ 190, ಕೊಟ್ಟಾಯಂ 176, ಇಡುಕ್ಕಿ 77, ಎರ್ನಾಕುಳಂ 120, ತ್ರಿಶೂರ್ 205, ಪಾಲಕ್ಕಾಡ್ 185, ಮಲಪ್ಪುರಂ 265, ಕೋಝಿಕೋಡ್ 407, ವಯನಾಡ್ 34, ಕಣ್ಣೂರು 216, ಕಾಸರಗೋಡು 81 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 44,389 ಮಂದಿ ಜನರಿಗೆ ಸೋಂಕು  ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 11,17,700 ಮಂದಿ ಜನರನ್ನು ಕೋವಿಡ್ ನಿಂದ ಮುಕ್ತಗೊಳಿಸಲಾಗಿದೆ.

              ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,70,810 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,64,325 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 6485 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಒಟ್ಟು 1133 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

                ಇಂದು 9 ಹೊಸ ಹಾಟ್‍ಸ್ಪಾಟ್‍ಗಳಿವೆ. ಯಾವುದೇ ಪ್ರದೇಶವನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿಲ್ಲ. ಪ್ರಸ್ತುತ ಒಟ್ಟು 391 ಹಾಟ್‍ಸ್ಪಾಟ್‍ಗಳಿವೆ.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries