ನವದೆಹಲಿ: ಕೇರಳ, ಪುದುಚೇರಿ ತಮಿಳುನಾಡು ವಿಧಾನಸಭೆಗೆ ಒಂದೇ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಉತ್ತಮ ಮತದಾನ ಪ್ರಮಾಣ ದಾಖಲಾಗಿದೆ. ಹಾಗೇಯೇ ಅಸ್ಸಾಂನಲ್ಲಿ ಮೂರನೇ ಹಾಗೂ ಕೊನೆ ಹಂತದ ಮತದಾನ, ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಮತದಾನ ಸಹ ಯಶಸ್ವಿಯಾಗಿದೆ.
ಸಂಜೆ ಏಳರವರೆಗಿನ ವರದಿಯಂತೆ ಕೇರಳದಲ್ಲಿ 74.02%, ತಮಿಳುನಾಡಿನಲ್ಲಿ 65.11%, ಅಸ್ಸಾಂನಲ್ಲಿ 82.29% ಪುದುಚೇರಿಯಲ್ಲಿ 78.13% ಮತ್ತು ಪಶ್ಚಿಮ ಬಂಗಾಳದಲ್ಲಿ 77.38% ಮತದಾನ ದಾಖಲಾಗಿದೆ.
ಚುನಾವಣೆಗಳ ಫಲಿತಾಂಶ ಮೇ 2ರಂದು ಪ್ರಕಟವಾಗಲಿದೆ.