ತಿರುವನಂತಪುರ: ಇಂದು ನಡೆದ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಉತ್ತಮ ಮತದಾನ ದಾಖಲಿಸಲ್ಪಟ್ಟಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಮತದಾನವು ಶೇಕಡಾ 73.58 ರಷ್ಟಿದೆ. 2016 ರಲ್ಲಿ ಶೇ 77.35 ರಷ್ಟು ಮತದಾನವಾಗಿತ್ತು.
ಮೇ 2 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಕಣ್ಣೂರಿನಲ್ಲಿ ಅತೀಹೆಚ್ಚು ಶೇ 77.02 ರಷ್ಟು ಮತ ಚಲಾಯಿಸಲು ನೋಂದಾಯಿಸಿಕೊಂಡರೆ, ಪತ್ತನಂತಿಟ್ಟಲ್ಲಿ ಶೇ 65.05 ರಷ್ಟಿದೆ.
ಮುಂಜಾನೆಯಿಂದಲೇ ಹಲವಾರು ಬೂತ್‌ಗಳಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾವಣೆಗೆ ಆಗಮಿಸಿದ್ದರು. ಮೊದಲ ಕೆಲವು ಗಂಟೆಗಳು ಬಿರುಸಿನ ಮತ ದಾಖಲಿಸಲ್ಪಟ್ಟರೂ ಬಳಿಕ ಕುಸಿತ ಕಂಡಿತು. ಮೊದಲ ಎರಡು ಗಂಟೆಗಳಲ್ಲಿ ಶೇ 15 ರಷ್ಟು ಮತದಾನವಾಗಿತ್ತು.