ತಿರುವನಂತಪುರ: ನಿನ್ನೆ ನಡೆದ ವಿಧಾನಸಭಾ ಚುನಾವಣೆಯ ಅಂತಿಮ ಶೇಕಡಾವಾರು ಮತಚಲಾವಣಾ ಅಂಕಿಅಂಶದಂತೆ ರಾಜ್ಯದಲ್ಲಿ ಶೇ 74.02 ರಷ್ಟು ಮತದಾನ ದಾಖಲಾಗಿದೆ. ಕೋಝಿಕೋಡ್ ಶೇ 77.9 ರಷ್ಟು ಮತದಾನ ದಾಖಲಿಸಿದೆ. ಪತ್ತನಂತಿಟ್ಟದಲ್ಲಿ ಶೇಕಡಾ 68.09 ರಷ್ಟು ಕಡಿಮೆ ಮತದಾನವಾಗಿದೆ.
ಮಲಪ್ಪುರಂ ಉಪಚುನಾವಣೆಯಲ್ಲಿ ಮತದಾನ 74.53%.ದಾಖಲಾಗಿದೆ. 2016 ರ ವಿಧಾನಸಭಾ ಚುನಾವಣೆಯಲ್ಲಿ ಶೇ 77.35 ರಷ್ಟು ಮತದಾನವಾಗಿತ್ತು. ಬಿಜೆಪಿ ಕಣ್ಣಿಟ್ಟಿರುವ ಮಂಜೇಶ್ವರದಲ್ಲಿ 76.61% ರಷ್ಟು ಮತದಾನವಾಗಿದೆ. 2016 ರಲ್ಲಿ 76.31%. ಮತದಾನವಾಗಿದೆ. ನೇಮಂ ನಲ್ಲಿ ಮತದಾನ 69.65% ಕ್ಕೆ ಇಳಿದಿದೆ.
ಕೋಝಿಕೋಡ್ ನಂತರ ಕಣ್ಣೂರು, ಪಾಲಕ್ಕಾಡ್, ತ್ರಿಶೂರ್ ಮತ್ತು ಎರ್ನಾಕುಳಂ ಜಿಲ್ಲೆಗಳಲ್ಲಿ ಹೆಚ್ಚಿನ ಮತದಾನ ದಾಖಲಾಗಿದೆ. ಗುರುವಾಯೂರ್ ಮತ್ತು ತಲಶೇರಿ ಕ್ಷೇತ್ರಗಳಲ್ಲಿ ಮತದಾನದ ಕುಸಿತವು ಕಳವಳಕ್ಕೆ ಕಾರಣವಾಗಿದೆ. ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿಗೆ ಅಭ್ಯರ್ಥಿಗಳಿಲ್ಲದ ಕಾರಣ ಬಿಜೆಪಿ ಮತದಾರರು ಮತ ಚಲಾಯಿಸಿಲ್ಲ ಎಂದು ನಂಬಲಾಗಿದೆ.
ಜಿಲ್ಲಾ ಮತದಾನದ ಶೇಕಡಾವಾರು: ಕಾಸರಗೋಡು 74.8, ಕಣ್ಣೂರು 77.8, ವಯನಾಡ್ 74.7, ಕೋಝಿಕ್ಕೋಡ್ 78.3, ಮಲಪ್ಪುರಂ 74.0, ಪಾಲಕ್ಕಾಡ್ 76.1, ತ್ರಿಶೂರ್ 73.6, ಎರ್ನಾಕುಳಂ 74.0, ಇಡುಕ್ಕಿ 70.3, ಕೊಟ್ಟಾಯಂ 72.1, ಆಲಪ್ಪುಳ 74.4, ಪತ್ತನಂತಿಟ್ಟು 67.1, ಕೊಲ್ಲಂ 73, ತಿರುವನಂತಪುರ 70.2 ಎಂಬಂತೆ ಮತಗಳು ಚಲಾವಣೆಗೊಂಡಿದೆ.