ತಿರುವನಂತಪುರ: ರಾಜ್ಯದಲ್ಲಿ ಇಂದು ಕೋವಿಡ್ ಸ್ಥಿತಿ ತೀವ್ರ ಸ್ವರೂಪ ಪಡೆದಿದ್ದು, ಇಂದು 7515 ಮಂದಿ ಜನರಿಗೆ ಸೋಂಕು ದೃಢಪಡಿಸಲಾಗಿದೆ. ಎರ್ನಾಕುಳಂ 1162, ಕೋಝಿಕೋಡ್ 867, ತ್ರಿಶೂರ್ 690, ಮಲಪ್ಪುರಂ 633, ಕೊಟ್ಟಾಯಂ 629, ತಿರುವನಂತಪುರ 579, ಕಣ್ಣೂರು 503, ಆಲಪ್ಪುಳ 456, ಕೊಲ್ಲಂ 448, ಕಾಸರಗೋಡು 430, ಪಾಲಕ್ಕಡ್ 348,ಪತ್ತನಂತಿಟ್ಟು 312, ಇಡುಕ್ಕಿ 259, ವಯನಾಡ್ 199 ಎಂಬಂತೆ ಸೋಂಕು ಬಾಧಿಸಿ ಆತಂಕ ಮೂಡಿಸಿದೆ.
ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ನಿಂದ ಆಗಮಿಸಿದ ಯಾರಿಗೂ ಕೋವಿಡ್ ಖಚಿತಪಡಿಸಿಲ್ಲ. ಯುಕೆ (104), ದಕ್ಷಿಣ ಆಫ್ರಿಕಾ (7) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 112 ಮಂದಿ ಜನರಿಗೆ ಈವರೆಗೆ ಸೋಂಕು ದೃಢಪಟ್ಟಿತ್ತು. ಈ ಪೈಕಿ 107 ಮಂದಿಗೆ ನೆಗೆಟಿವ್ ಆಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಟ್ಟ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 73,441 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ. 10.23 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,38,87,699 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 20 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 4,814 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 198 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 6747 ಮಂದಿ ಜನರಿಗೆ ಸೋಂಕು ತಗಲಿತು. 534 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಳಂ 1114, ಕೋಝಿಕೋಡ್ 835, ತ್ರಿಶೂರ್ 661, ಮಲಪ್ಪುರಂ 597, ಕೊಟ್ಟಾಯಂ 570, ತಿರುವನಂತಪುರ 417, ಕಣ್ಣೂರು 405, ಆಲಪ್ಪುಳ 449, ಕೊಲ್ಲಂ 444, ಕಾಸರಗೋಡು 388, ಪಾಲಕ್ಕಾಡ್ 144, ಪತ್ತನಂತಿಟ್ಟು 280, ಇಡುಕ್ಕಿ 251, ವಯನಾಡ್ 192ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು ಮೂವತ್ತಾರು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿರುವುದು ದೃಢಪಟ್ಟಿದೆ. ಕಣ್ಣೂರು 9, ತ್ರಿಶೂರ್ 7, ಕಾಸರಗೋಡು 6, ಪಾಲಕ್ಕಾಡ್ 4, ಕೋಝಿಕೋಡ್ 3, ತಿರುವನಂತಪುರ, ವಯನಾಡ್ ತಲಾ 2, ಪತ್ತನಂತಿಟ್ಟು, ಕೊಟ್ಟಾಯಂ ಮತ್ತು ಮಲಪ್ಪುರಂ ತಲಾ 1 ಎಂಬಂತೆ ಸೋಂಕಿಗೊಳಗಾಗಿದ್ದಾರೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 2959 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 196, ಕೊಲ್ಲಂ 583, ಪತ್ತನಂತಿಟ್ಟು 132, ಆಲಪ್ಪುಳ 81, ಕೊಟ್ಟಾಯಂ 216, ಇಡಕ್ಕಿ 106, ಎರ್ನಾಕುಳಂ 336, ತ್ರಿಶೂರ್ 186, ಪಾಲಕ್ಕಾಡ್ 61, ಮಲಪ್ಪುರಂ 263, ಕೋಝಿಕೋಡ್ 409, ವಯನಾಡ್ 63, ಕಣ್ಣೂರು 266, ಕಾಸರಗೋಡು 61 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 52,132 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 11,23,133 ಮಂದಿ ಜನರನ್ನು ಕೋವಿಡ್ ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,82,589 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,75,007 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 7,582 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಒಟ್ಟು 1289 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು 14 ಹೊಸ ಹಾಟ್ಸ್ಪಾಟ್ಗಳಿವೆ. ಒಂದು ಪ್ರದೇಶವನ್ನು ಹಾಟ್ಸ್ಪಾಟ್ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 416 ಹಾಟ್ಸ್ಪಾಟ್ಗಳಿವೆ.