ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಅಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಪ್ರತಿರೋಧ ಚಟುವಟಿಕೆಗಳನ್ನು ಚುರುಕುಗೊಳಿಸಲು 76 ಮಂದಿ ಸೆಕ್ಟರ್ ಮೆಜಿಸ್ಟ್ರೇಟ್ ಗಳನ್ನು ನೇಮಿಸಲಾಗಿದೆ.
16 ಮಂದಿ ರಿಸರ್ವ್ ಮಂದಿಯೂ ಇದರಲ್ಲಿ ಸೇರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಪ್ರಕಟಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಸೆಕ್ಟರ್ ಮೆಜಿಸ್ಟ್ರೇಟ್ ಗಳ ಕರ್ತವ್ಯ ಸಂಬಂಧ ಆದೇಶಗಳು:
* ಸೆಕ್ಟರ್ ಮೆಜಿಸ್ಟ್ರೇಟ್ ರ ಹೊಣೆ ಅಧಿಕಾರ ವ್ಯಾಪ್ತಿಯ ಅಂಗಡಿಗಳು, ವ್ಯಾಪಾರ ಸಂಸ್ಥೆಗಳು, ವಿವಾಹಗಳು, ಮರಣಾನಂತರ ಸಮಾರಂಭಗಳು, ಜನ ಗುಂಪು ಸೇರುವ ಇತರ ಕಾರ್ಯಕ್ರಮಗಳು ಇತ್ಯಾದಿ ಜಾಗಗಳನ್ನು ಸಂದರ್ಶಿಸಿ ಸಂಹಿತೆ ಉಲ್ಲಂಘನೆ ಪತ್ತೆ ಮಾಡಿ ಪೆÇೀರ್ಟಲ್ ನಲ್ಲಿ ನಮೂದಿಸಬೇಕು. ಸದ್ರಿ ಕಾರ್ಯಕ್ರಮಗಳು ನಡೆಸುವ ನಿಟ್ಟಿನಲ್ಲಿ ಕೋವಿಡ್ ಜಾಗ್ರತಾ ಪೆÇೀರ್ಟಲ್ ನಲ್ಲಿ ನೋಂದಣಿ ನಡೆಸಬೇಕು. ಮುಕ್ತ ಪ್ರದೇಶಗಳಲ್ಲಿ 150 ಮಂದಿ, ಒಳಾಂಗಣದಲ್ಲಿ 75 ಮಂದಿ ಮಾತ್ರ ಭಾಗವಹಿಸಬಹುದಾಗಿದೆ.
* ಸೆಕ್ಟರ್ ಮೆಜಿಸ್ಟ್ರೇಟ್ ಗಳು ಜಿಲ್ಲಾ ಪಿಡುಗು ನಿವಾರಣೆ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗೆ ಸಂಬಂಧ ಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೋವಿಡ್ ಕಟ್ಟುನಿಟ್ಟು- ಪ್ರತಿರೋಧ ಚಟುವಟಿಕೆಗಳ ಏಕೀಕರಣ ನಡೆಸಿ ವರದಿ ಸಲ್ಲಿಸಬೇಕು.
* ಕೋವಿಡ್ ನಿಯಂತ್ರಣ-ಪ್ರತಿರೋಧ ಚಟುವಟಿಕೆಗಳಲ್ಲಿ ಮಾಸ್ಟರ್ ಯೋಜನೆಗಾಗಿ ಕರ್ತವ್ಯದಲ್ಲಿರುವ ಶಿಕ್ಷಕರ ಚಟುವಟಿಕೆಗಳನ್ನು ಏಕೀಕರಣಗೊಳಿಸಿ ಅವರಿಗೆ ಪೂರಕರಾಗಿ ಚಟುವಟಿಕೆ ನಡೆಸಬೇಕು.
* ವಿವಿಧ ಹಂತಗಳಲ್ಲಿರುವ ಕೋವಿಡ್ ಕಟ್ಟುನಿಟ್ಟು ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ಸಹಕರಿಸಿ ಚಟುವಟಿಕೆ ನಡೆಸಬೇಕು.
* ಜಾಗ್ರತಾ ಸಮಿತಿಗಳು ಸೂಕ್ತ ರೀತಿ ಸಭೆ ಸೇರಿ ಅಗತ್ಯದ ಪ್ರತಿರೋಧ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ಖಚಿತತೆ ಮೂಡಿಸಬೇಕು.
* ಸದ್ರ ಅಂಗಡಿಗಳು, ಇನ್ನಿತರ ಸಂಸ್ಥೇಗಳು ರಾತ್ರಿ 9 ಗಂಟೆ ವರೆಗೆ ಮಾತ್ರ ತೆರೆದು ಕಾರ್ಯಾಚರಿಸಬೇಕು. ಇದಕ್ಕೆ ವಿರುದ್ಧವಾಗಿ ಕಾರ್ಯಾಚರಿಸಿದರೆ ಕೇಸು ದಾಖಲಿಸಬೇಕು.
* ಅಂಗಡಿಗಳಲ್ಲಿ, ವ್ಯಾಪಾರ ಸಂಸ್ಥೆಗಳಲ್ಲಿ ಮಾಲೀಕರು, ನೌಕರರು ಮಾಸ್ಕ್, ಗ್ಲೌಸ್ ಸೂಕ್ತ ರೀತಿ ಧರಿಸಿರುವ, ಸಾನಿಟೈಸರ್ ಬಳಸುತ್ತಿರುವ ಬಗ್ಗೆ ಖಚಿತತೆ ಮೂಡಿಸಬೇಕು.
* ಸಂಸ್ಥೆಗಳ ಮುಂದೆ ಜನನಿಭಿಡತೆ ಉಂಟಾಗುತ್ತಿಲ್ಲ, ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ, ನಿಗದಿತ ಸಂಖ್ಯೆ ಜನ ಮಾತ್ರ ಅಂಗಡಿಯೊಳಕ್ಕೆ ಪ್ರವೇಶಿಸುತ್ತಿದ್ದಾರೆ ಎಂಬ ಬಗ್ಗೆ ಖಚಿತತೆ ಮೂಡಿಸಬೇಕು.
* ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, ಕೆ.ಎಸ್.ಟಿ.ಪಿ. ರಸ್ತೆ ಬದಿಗಳ ತಳ್ಳುಗಾಡಿಗಳಲ್ಲಿ ಪಾರ್ಸೆಲ್ ಆಗಿ ಮಾತ್ರ ಆಹಾರ ನೀಡಲಾಗುತ್ತಿದೆ. ತಳ್ಳುಗಾಡಿಯ ಸದಸ್ಯರು ಮಾಸ್ಕ್, ಗ್ಲೌಸ್ ಧರಿಸುತ್ತಿದ್ದಾರೆ, ಜನ ಗುಂಪು ಸೇರುತ್ತಿಲ್ಲ. ಅಲ್ಲೇ ಕುಳಿತು ಆಹಾರ ಸೇವಿಸುತ್ತಿಲ್ಲ ಎಂಬ ಬಗ್ಗೆ ಖಚಿತತೆ ಮೂಡಿಸಬೇಕು. ಆದೇಶ ಉಲ್ಲಂಘನೆ ನಡೆದಲ್ಲಿ ಕೇಸು ದಾಖಲಿಸಬೇಕು.
* ಸಾರ್ವಜನಿಕ ಪ್ರದೇಶಗಳಲ್ಲಿ ಜನ ಕೋವಿಡ್ ಸಂಹಿತೆಗಳನ್ನು ಕಡ್ಡಾಯವಾಗಿ ಪಾಲಿಸುತ್ತಿರುವ ಬಗ್ಗೆ ಖಚಿತತೆ ಮೂಡಿಸಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ ಎಲ್ಲರೂ ಸೂಕ್ತರೀತಿ ಮಾಸ್ಕ್ ಧರಿಸಬೇಕು, ರಸ್ತೆಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳಕೂಡದು. ಆದೇಶ ಉಲ್ಲಂಘಿಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು.
* ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿ, ಆರೋಗ್ಯ ಇಲಾಖೆ ಕ್ವಾರೆಂಟೈನ್ ನಲ್ಲಿರಲು ಆದೇಶಿಸಿರುವ ವ್ಯಕ್ತಿಗಳು ಕಟ್ಟುನಿಟ್ಟು ಪಾಲಿಸುತ್ತಿದ್ದಾರೆಯೇ ಎಂದು ಖಚಿತಪಡಿಸಬೇಕು.
* ಬಸ್ ಗಳಲ್ಲಿ ಕೋವಿಡ್ ಸಂಹಿತೆ ಪಾಲಿಸದೇ ಇರುವವರನ್ನು ಏರಿಸಕೂಡದು.