ಕಾಸರಗೋಡು; ವಿಧಾನಸಭೆ ಚುನಾವಣೆಯ ಮತಗಣನೆಗಾಗಿ ಕಾಸರಗೋಡು ಜಿಲ್ಲೆಯಲ್ಲಿ 885 ಸಿಬ್ಬಂದಿಯ ರಾಂಡಮೈಸೇಷನ್ ಮೂಲಕ ನೇಮಕಾತಿ ನಡೆದಿದೆ.
ತಲಾ 295 ಮಂದಿ ಕೌಂಟಿಂಗ್ ಸೂಪರ್ ವೈಸರ್ ಗಳು, ಮೈಕ್ರೋ ಒಬ್ಸರ್ ವರ್ ಗಳನ್ನುನೇಮಿಸಲಾಗಿದೆ. ಇವರಿಗೆ ಏ.23,24ರಂದು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ತರಬೇತಿ ನಡೆಯಲಿದೆ. 23ರಂದು ಬೆಳಗ್ಗೆ 10 ಗಂಟೆಗೆ ಕೌಂಟಿಂಗ್ ಸೂಪರ್ ವೈಸರ್ ಗಳಿಗೆ, ಮಧ್ಯಾಹ್ನ 2 ಗಂಟೆಗೆ ಸಹಾಯಕರಿಗೆ, 24ರಮದು ಬೆಳಗ್ಗೆ 10 ಗಂಟೆಗೆ ಮೈಕ್ರೋ ಒಬ್ಸರ್ ವರ್ ಗಳಿಗೆ ತರಬೇತಿ ನಡೆಯಲಿದೆ.