ತಿರುವನಂತಪುರ: ಕೋವಿಡ್ ಹರಡುವಿಕೆಯ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಿಯಂತ್ರಣಗಳನ್ನು ಬಿಗಿಗೊಳಿಸಲು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಾರ್ವಜನಿಕ ಕಾರ್ಯಕ್ರಮಗಳು ಸೇರಿದಂತೆ ಇತರ ಕಾರ್ಯಕ್ರಮಗಳಿಗೆ ಕಠಿಣ ನಿಯಂತ್ರಣ ಹೇರಲಾಗುವುದು.
ಹೊರಾಂಗಣ ಕಾರ್ಯಕ್ರಮಗಳಲ್ಲಿ ಗರಿಷ್ಠ 200 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಸಾರ್ವಜನಿಕ ಕಾರ್ಯಗಳು ಎರಡು ಗಂಟೆಗಳ ಅವಧಿ ಮೀರಬಾರದು. ರಾತ್ರಿ 9 ಗಂಟೆಗೆ ಹೋಟೆಲ್‍ಗಳು ಮತ್ತು ಅಂಗಡಿಗಳನ್ನು ಮುಚ್ಚಲು ನಿರ್ದೇಶಿಸಲು ನಿರ್ಧರಿಸಿದೆ.
ಸಾರ್ವಜನಿಕ ಕಾರ್ಯಕ್ರಮಗಳನ್ನು ಅನುಮತಿಸಲಾಗುವುದಿಲ್ಲ. ಪ್ಯಾಕೆಟ್ ಆಹಾರವನ್ನು ಮಾತ್ರ ಅನುಮತಿಸಲಾಗುವುದು. ಶೇ. 50 ರಷ್ಟು ಮಂದಿಗೆ ಮಾತ್ರ ಹೋಟೆಲ್ ಒಳಗಡೆ ಏಕಕಾಲದಲ್ಲಿ ಪ್ರವೇಶ ವ್ಯವಸ್ಥೆ ಏರ್ಪಡಿಸಲಾಗುತ್ತದೆ. ಹಬ್ಬಗಳ ಹೆಸರಿನ ಮೆಗಾ ಶಾಪಿಂಗ್ ಮೇಳಗಳನ್ನು ನಿಷೇಧಿಸಲಾಗಿದೆ.
ಕೋವಿಡ್ ರಾಜ್ಯದಲ್ಲಿ ತೀವ್ರಗೊಳ್ಳುತ್ತಿರುವಂತೆ ವಾರ್ಡ್ ಮಟ್ಟದ ಮೇಲ್ವಿಚಾರಣೆಯನ್ನು ಬಿಗಿಗೊಳಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.