ಕೊಚ್ಚಿ: ವಿ.ಎ. ಸುಕುಮಾರನ್ ಅವರಿಗೆ ಈಗ 90 ನೇ ವಯಸ್ಸು. ವಿಶೇಷವೆಂದರೆ ಇವರು ಇದೇ ಮೊದಲ ಬಾರಿಗೆ ನಾಳೆ ಮತ ಚಲಾಯಿಸಲಿದ್ದಾರೆ!. ಕೊಚ್ಚಿಯ ವಡುತಲಾದಲ್ಲಿ ವಾಸಿಸುವ ಸುಕುಮಾರನ್ ಅವರು ಮತ ಚಲಾಯಿಸಲು ಇನ್ನೂ ನೋಂದಣಿ ಮಾಡಿರಲಿಲ್ಲ. ಯಾವುದೇ ರಾಜಕಾರಣಿಗಳು ತನಗೆ ಇಷ್ಟವಿಲ್ಲ ಎಂದು ಸುಕುಮಾರನ್ ಹೇಳುತ್ತಾರೆ. ಹಾಗೆಂದು ಮತದಾನವೆಂಬ ಹಕ್ಕನ್ನು ಚಲಾಯಿಸದಿರಲು ಅದು ಒಂದೇ ಕಾರಣವಲ್ಲ.
ಮತದಾನದ ಹಕ್ಕುಗಳ ಬಗ್ಗೆ ಸುಕುಮಾರನ್ ಅವರ ಬಳಿ ಯಾವುದೇ ದಾಖಲೆ ಇರಲಿಲ್ಲ. ಸುಕುಮಾರನ್ ಮರಡು ಮೂಲದವರು. ಅಲ್ಲಿಂದ ಅವರು ತನ್ನ ಎಳೆಯ ಹರೆಯದಲ್ಲೇ ಪಾಲಕರೊಂದಿಗೆ ವಡುತಲದಲ್ಲಿ ಬಂದು ನೆಲಸಿದವರು. ಅವರು ಕೊಚ್ಚಿಯ ವಿವಿಧ ಭಾಗಗಳಲ್ಲಿ ಹಾಲು ಮಾರಾಟ ಮಾಡಲು ಪ್ರಾರಂಭಿಸಿದರು.
ಅವರು 52 ವರ್ಷಗಳಿಂದ ವದುತಲಾದಲ್ಲಿ ವಾಸಿಸುತ್ತಿದ್ದಾರೆ. ಈ ಮಧ್ಯೆ, ಅನೇಕ ಬಾಡಿಗೆ ಮನೆಗಳು ಬದಲಾಗಿವೆ. ಅವರ ಪತ್ನಿ 30 ವರ್ಷಗಳ ಹಿಂದೆ ನಿಧನರಾದರು. ಇಬ್ಬರು ಮಕ್ಕಳು ರಾಜ್ಯದಿಂದ ಹೊರಗಿದ್ದಾರೆ.
ಬೂತ್ 66 ರಲ್ಲಿನ ಬಿ.ಎ. ಸುಕುಮಾರನ್ ಅವರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಈಗಷ್ಟೇ ಪ್ರಯತ್ನ ಮಾಡಲಾಗಿದೆ. ವೃದ್ಧಾಪ್ಯ ಪಿಂಚಣಿಗೆ ಅರ್ಜಿ ಸಲ್ಲಿಸಿದಾಗ ಸುತಕುಮಾರನ್ ಬಳಿ ಯಾವುದೇ ದಾಖಲೆಗಳಿರಲಿಲ್ಲ. ನಂತರ ವೈದ್ಯರು ಜನರಲ್ ಆಸ್ಪತ್ರೆಯಿಂದ ವಯಸ್ಸಿನ ಪುರಾವೆ ನೀಡಿದರು. ಈಗ ವಾಸಿಸುವ ವಿಳಾಸಕ್ಕೆ ಶಾಶ್ವತ ನಿವಾಸಿಯಾಗಿದ್ದಾನೆ ಎಂಬುದಕ್ಕೆ ಪುರಾವೆ ಇದಷ್ಟೇ ಅವರ ಬಳಿ ಇರುವುದು. ಇದರೊಂದಿಗೆ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಲಾಯಿತು. ಗುರುತಿನ ಚೀಟಿ ಸಹ ಸ್ವೀಕರಿಸಲಾಗಿದೆ.