ತ್ರಿಶೂರ್: ಚುನಾವಣಾ ಆಯೋಗದ ಅಧಿಕಾರಿಗಳ ಸೋಗಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ 94 ಲಕ್ಷ ರೂ.ದೋಚಿದ ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಲಾಗಿದೆ. ಕಣ್ಣೂರಿನ ಚಿರಕ್ಕಲ್ ಮೂಲದ ಮುಬಾರಕ್ ಎಂಬಾತನನ್ನು ಒಲ್ಲೂರು ಪೋಲೀಸರು ಬಂಧಿಸಿದ್ದಾರೆ. ಮಾರ್ಚ್ 22 ರಂದು ಚುನಾವಣಾ ಅಜೆರ್ಂಟ್ ಸ್ಟಿಕ್ಕರ್‍ನೊಂದಿಗೆ ಇನ್ನೋವಾ ಕಾರಲ್ಲಿ ಈ ಕೃತ್ಯ ನಡೆದಿತ್ತು.
ದರೋಡೆ ನಡೆಸಿದ ತಂಡದಲ್ಲಿ ಹತ್ತು ಮಂದಿ ಇದ್ದರೆಂದು ತಿಳಿದುಬಂದಿದೆ. ತರಕಾರಿಗಳೊಂದಿಗೆ ತಮಿಳುನಾಡಿನಿಂದ ಮುವಾಟ್ಟುಪುಳಕ್ಕೆ ಬರುತ್ತಿದ್ದ ಲಾರಿಯನ್ನು ನಿಲ್ಲಿಸಿ ಲಾರಿಯ ನೌಕರರನ್ನು ಪ್ರಶ್ನಿಸುವ ನಾಟಕವಾಡಿ ಹಣ ದೋಚಲಾಗಿದೆ. ಹಳೆಯ ಚಿನ್ನ ಮಾರಾಟದಿಂದ ಲಭಿಸಿದ ಹಣ ದೋಚಲಾಗಿದೆ ಎಂದು ಲಾರಿ ಮಾಲೀಕರು ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.