ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೊಸ ನಿಬಂಧನೆಗಳನ್ನು ಹೇರಲಾಗಿದೆ. ಪ್ರಸ್ತುತ ಎರಡು ವಾರಗಳವರೆಗೆ ನಿರ್ಬಂಧಗಳು ಜಾರಿಯಲ್ಲಿರಲಿವೆ. ಶಾಪಿಂಗ್ ಮಾಲ್ ಗಳು ಹಾಗೂ ಇತರ ವ್ಯಾಪಾರ ಕೇಂದ್ರಗಳು ರಾತ್ರಿ 9 ಗಂಟೆಯವರೆಗೆ ಮಾತ್ರ ತೆರೆದಿರಬೇಕು ಎಮದು ನಿಬಂಧನೆ ವಿಧಿಸಲಾಗಿದೆ.
ಹೋಟೆಲ್ ಗಳಿಗೆ ಒಟ್ಟು ಸಾಮಥ್ರ್ಯದ ಅರ್ಧದಷ್ಟು ಸೀಟುಗಳಿಗೆ ಮಾತ್ರ ಪ್ರವೇಶಾನುಮತಿಗೆ ಸೀಮಿತಗೊಳಿಸಲಾಗಿದೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳು, ಇತರ ಸಮಾರಂಭಗಳಲ್ಲಿ ನೂರು ಜನರಿಗೆ ಮಾತ್ರ ಸಭಾಂಗಣಕ್ಕೆ ಪ್ರವೇಶಿಸಲು ಅವಕಾಶನೀಡಲಾಗಿದೆ. ರಸ್ತೆ ಬದಿಗಳ ಆಹಾರ, ಪಾನೀಯ ವಿತರಣೆಗೂ ನಿಬಂಧನೆ ಇದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ರಾಜ್ಯದಿಂದ ಹೊರ ಹೋಗಲು, ರಾಜ್ಯದೊಳಗೆ ಬರಲು ಪ್ರಯಾಣಕ್ಕೆ ಯಾವುದೇ ನಿಬರ್ಂಧಗಳನ್ನು ವಿಧಿಸಲಾಗಿಲ್ಲ. ಬಸ್‍ಗಳಲ್ಲಿ ಕುಳಿತು ಪ್ರಯಾಣಿಸಲು ಮಾತ್ರ ಅವಕಾಶವಿದೆ. ಪ್ರಯಾಣಿಕರನ್ನು ಇನ್ನು ಬಸ್ ನ ಒಟ್ಟು ಆಸನ ವ್ಯವಸ್ಥೆಯ ಅನುಪಾತದಲ್ಲಿ ಮಾತ್ರ ಪ್ರವೇಶಾವಕಾಶ ನೀಡಲಾಗುತ್ತದೆ.
ಇತರ ರಾಜ್ಯಗಳಿಂದ ಬರುವವರು ಜಾಗ್ರತಾ ಪೆÇೀರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಇಫ್ತಾರ್ ಕೂಟಗಳು ಸೇರಿದಂತೆ ಧಾರ್ಮಿಕ ಸಮಾರಂಭಗಳನ್ನು ನಿರ್ಬಂಧಿಸಲಾಗುವುದು. ಹೆಚ್ಚಿನ ಪರೀಕ್ಷಾ ಸಕಾರಾತ್ಮಕ ದರವನ್ನು ಹೊಂದಿರುವ ಪ್ರದೇಶಗಳಲ್ಲಿ ಸೆಕ್ಷನ್ 144 ನ್ನು ಘೋಷಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳು ಹೊಂದಿರುವರು ಎಂದು ಆದೇಶದಲ್ಲಿ ತಿಳಿಸಲಾಗಿದೆ.