ನವದೆಹಲಿ: ಎರಡನೇ ಅಲೆಯಲ್ಲಿ ಡಬಲ್ ರೂಪಾಂತರಿ ಕೊರೋನಾ ವೈರಾಣು ತೀವ್ರ ಸ್ವರೂಪದಲ್ಲಿ ಹರಡುತ್ತಿರುವುದರ ನಡುವೆಯೇ ಹೊಸ ತಲೆನೋವು ಭಾರತಕ್ಕೆ ಎದುರಾಗಿದೆ.
ಜೀನೋಮ್ ತಜ್ಞರ ಅಧ್ಯಯನದ ಪ್ರಕಾರ, ಕೊರೋನಾದ ಮತ್ತೊಂದು ವಂಶಾವಳಿ B.1.618 ರೋಗನಿರೋಧಕ ಶಕ್ತಿಯನ್ನೂ ಮೀರಿ ಹರಡುವ ಸಾಮರ್ಥ್ಯವನ್ನು ಹೊಂದಿದ್ದು, ಪಶ್ಚಿಮ ಬಂಗಾಳದಲ್ಲಿ ಹೆಚ್ಚಾಗಿ ಹರಡುತ್ತಿದೆ ಎಂದು ಎಚ್ಚರಿಸಿದ್ದಾರೆ.
ಬಂಗಾಳ-ಮೂಲದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಬಯೋಮೆಡಿಕಲ್ ಜೀನೋಮಿಕ್ಸ್ B.1.618 ಸೀಕ್ವೆನ್ಸ್ ಆಧಾರದಲ್ಲಿ ತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಹೊಸ ರೂಪಾಂತರಿ ಕೊರೋನಾ, E484K ಸೇರಿದಂತೆ ವಿಶಿಷ್ಟವಾದ ಆನುವಂಶಿಕ ರೂಪಾಂತರಗಳ ಗುಣಲಕ್ಷಣಗಳನ್ನು ಹೊಂದಿದ್ದು, ಮೊನೊಕ್ಲೋನಲ್ ಪ್ರತಿಕಾಯಗಳು ಚೇತರಿಸಿಕೊಳ್ಳುವ ಪ್ಲಾಸ್ಮಾದ ಪ್ಯಾನಲ್ ಗಳನ್ನೂ ಮೀರಿ ಹರಡುವ ಸಾಮರ್ಥ್ಯ ಹೊಂದಿದೆ.
B.1.618 ವಂಶಾವಳಿಗಳ ಪ್ರಾರಂಭಿಕ ಸೀಕ್ವೆನ್ಸ್ ಗಳು ಪಶ್ಚಿಮ ಬಂಗಾಳದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು. ಇದೇ ಮಾದರಿಯ ವೈರಾಣು ದೇಶದ ವಿವಿಧ ಭಾಗಗಳಲ್ಲಿ ಕಂಡುಬಂದಿದೆ.