ತಿರುವನಂತಪುರ: ಸಂಬಂಧಿಕರ ನೇಮಕ ವಿವಾದದ ಮಧ್ಯೆ ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲಿಲ್ ರಾಜೀನಾಮೆ ನೀಡಿದ್ದಾರೆ. ಕೆಲವು ಕ್ಷಣಗಳ ಹಿಂದೆ ಜಲೀಲ್ ಮುಖ್ಯಮಂತ್ರಿಗೆ ರಾಜೀನಾಮೆ ಪತ್ರ ನೀಡಿದರು. ಲೋಕಾಯುಕ್ತ ವರದಿಯ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿರುವುದಾಗಿ ತಿಳಿದುಬಂದಿದೆ.
ಸ್ವಜನಪಕ್ಷಪಾತದ ಮೂಲಕ ಅಧಿಕಾರ ದುರುಪಯೋಗಪಡಿಸಿದ್ದರ ಹಿನ್ನೆಲೆಯಲ್ಲಿ ಜಲೀಲ್ ಅವರನ್ನು ಸಚಿವಾಲಯದಿಂದ ತೆಗೆದುಹಾಕುವಂತೆ ಲೋಕಾಯುಕ್ತರು ಆದೇಶಿಸಿದ್ದರು. ಕೆ.ಟಿ.ಜಲೀಲ್ ಅವರು ರಾಜ್ಯ ಅಲ್ಪಸಂಖ್ಯಾತ ಹಣಕಾಸು ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕರಾಗಿ ಸಂಬಂಧಿಯಾದ ಕೆ.ಟಿ.ಅದೀಬ್ ಅವರನ್ನು ನೇಮಿಸಿದ್ದು ಅಧಿಕಾರದ ದುರುಪಯೋಗವೆಂಬುದು ಖಾತ್ರಿಯಾಗಿದೆ. ಜಲೀಲ್ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಅವರ ಪ್ರಮಾಣವಚನ ಉಲ್ಲಂಘಿಸಿದ್ದಾರೆ ಎಂದು ಲೋಕಾಯುಕ್ತರು ಕಂಡುಕೊಂಡರು. ಈ ನಿಟ್ಟಿನಲ್ಲಿ ಮುಂದಿನ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ವರದಿಯು ಮುಖ್ಯಮಂತ್ರಿಯನ್ನು ಕೇಳಿತ್ತು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಚಿವ ಕೆ.ಟಿ.ಜಲೀಲ್ ಅವರ ಕಚೇರಿಯು ಅವರ ಸೋದರಸಂಬಂಧಿ ಕೆ.ಟಿ.ಅಬಿದ್ ಅವರನ್ನು ರಾಜ್ಯ ಅಲ್ಪಸಂಖ್ಯಾತ ಹಣಕಾಸು ಅಭಿವೃದ್ಧಿ ನಿಗಮದ ಜನರಲ್ ಮ್ಯಾನೇಜರ್ ಆಗಿ ನೇಮಕ ಮಾಡಲಾಗಿತ್ತು.