ಜಕಾರ್ತಾ: ಇಂದಿನ ಡಿಜಿಟಲ್ ಯುಗದಲ್ಲಿ ಅನೇಕರು ತಂತ್ರಜ್ಞಾನ ಮೊರೆ ಹೋಗುತ್ತಾರೆ. ಹೀಗೆ ತಂತ್ರಜ್ಞಾನದಿಂದ ಕೆಲವರು ತಮ್ಮ ಜ್ಞಾನ ಕಳೆದುಕೊಂಡು ಕಡೆಗೆ ಫೇಚಿಗೆ ಸಿಲುಕಿರುತ್ತಾರೆ.
' ಇಂತಹುದೇ ಘಟನೆ ಇಂಡೋನೇಷಿಯಾದಲ್ಲಿ ಇತ್ತೀಚೆಗೆ ನಡೆದಿರುವುದು ಸ್ಥಳೀಯ ವೆಬ್ಸೈಟ್ನಲ್ಲಿ ವರದಿಯಾಗಿದೆ. ತಾನು ಮದುವೆಯಾಗಬೇಕಿರುವ ವಧುವಿನ ಮನೆಗೆ ಹೋಗಲು ಗೂಗಲ್ ಮ್ಯಾಪ್ ಸಹಾಯ ಪಡೆದಿದ್ದ ವ್ಯಕ್ತಿ ಇನ್ನಾರೋ ಮದುವೆಯಾಗಬೇಕಿದ್ದ ವಧುವಿನೆ ಮನೆಗೆ ತೆರಳಿ ಇನ್ನೇನು ಅದೇ ವಧುವನ್ನು ಮದುವೆಯಾಗುತ್ತಿದ್ದ ಘಟನೆ ನಡೆದಿದೆ.
ಇಂಡೋನೇಷಿಯಾದ ಹಳ್ಳಿಯೊಂದರಲ್ಲಿ ಇತ್ತೀಚೆಗೆ ಎರಡು ಮದುವೆ ಸಮಾರಂಭ ಆಯೋಜನೆಗೊಂಡಿದ್ದವು. ಇದರಲ್ಲಿ ಒಂದು ಮದುವೆ ಮನೆಗೆ ತೆರಳಬೇಕಿದ್ದ ವರನೊಬ್ಬ ತನ್ನದಲ್ಲದ ವಧುವಿನ ಮನೆಗೆ ತೆರಳಿದ್ದಾನೆ. ಅಲ್ಲಿ ಉಲ್ಪಾ ಎನ್ನುವ ವಧುವಿನ ಮನೆಗೆ ತನ್ನ ಸಂಗಡಿಗರೊಂದಿಗೆ ಹೋಗಿದ್ದಾನೆ. ಆರಂಭದಲ್ಲಿ ಪರಸ್ಪರ ಶುಭಾಶಯ, ಉಡುಗೊರೆ ವಿನಿಮಯ ಮಾಡಿಕೊಂಡಿದ್ದಾರೆ. ನಂತರ ವಧು ಉಲ್ಪಾ ಕಡೆಯವರಲ್ಲಿ ಒಬ್ಬನಿಗೆ ವರನ ಬಗ್ಗೆ ಸಂಶಯ ಬಂದಿದ್ದರಿಂದ ವಿಚಾರಿಸಿದಾಗ ಸತ್ಯ ಬಯಲಿಗೆ ಬಂದಿದೆ.
ನಂತರ ಈ ವಿಲಕ್ಷಣ ಘಟನೆ ನಡೆಯಲು, ತಾನು ಗೂಗಲ್ ಮ್ಯಾಪ್ ಬಳಸಿ ಮನೆ ಹುಡುಕಿಕೊಂಡು ಬಂದಿದ್ದೇವು ಎಂದು ಹೇಳಿದ್ದಾನೆ. ಕಡೆಗೆ ನೀಡಿದ್ದ ಉಡುಗೊರೆಗಳನ್ನು ವಾಪಸ್ ಪಡೆದು ದಾರಿ ತಪ್ಪಿದ ವರ, ತನ್ನ ಅಸಲಿ ಮಾವನ ಮನೆಗೆ ತೆರಳಿದ್ದಾನೆ.