HEALTH TIPS

ಯೋಧರ ಪ್ರಾಣ ತೆಗೆದ ನಕ್ಸಲರಿಗೆ ತಕ್ಕ ಪಾಠ ಕಲಿಸದೆ ಬಿಡಲಾಗದು! ಕ್ರಮಕ್ಕೆ ಸಿದ್ಧರಾದ ಅಮಿತ್​ ಷಾ

          ನವದೆಹಲಿ: ಶನಿವಾರದಂದು ಚತ್ತೀಸ್​ಗಢದ ಬಿಜಾಪುರ ಜಿಲ್ಲೆಯ ಸಿಲಗುರ್ ಅರಣ್ಯ ವಲಯದಲ್ಲಿ 22 ಯೋಧರು ನಕ್ಸಲರ ದಾಳಿಗೆ ಬಲಿಯಾದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ನಕ್ಸಲರ ವಿರುದ್ಧ ದೊಡ್ಡ ರೀತಿಯಲ್ಲಿ ಸೇಡು ತೀರಿಸಿಕೊಳ್ಳಲು ಸಂಚು ಹಾಕಲು ಆರಂಭಿಸಿದ್ದಾರೆಂದು ಹೇಳಲಾಗಿದೆ. ಅಸ್ಸಾಂ ಪ್ರವಾಸದಲ್ಲಿದ್ದ ಅವರು ಎಲ್ಲ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ದೆಹಲಿಗೆ ವಾಪಾಸಾಗಿದ್ದು, ಮುಂದಿನ ಕ್ರಮದ ಬಗ್ಗೆ ಸಿಆರ್​ಪಿಎಫ್​ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.


     ಅಸ್ಸಾಂನಲ್ಲಿ ಚುನಾವಣೆ ಇರುವ ಪ್ರಯುಕ್ತ ಅಮಿತ್​ ಷಾ ಅವರು ಅಲ್ಲಿ ಚುನಾವಣಾ ಪ್ರಚಾರದಲ್ಲಿದ್ದರು. ಆದರೆ ಶನಿವಾರ ನಡೆದ ದಾಳಿ ವಿಚಾರ ತಿಳಿಯುತ್ತಿದ್ದಂತೆ ಎಲ್ಲ ಕೆಲಸಗಳನ್ನು ಮೊಟಕುಗೊಳಿಸಿ ರಾಷ್ಟ್ರ ರಾಜಧಾನಿಗೆ ಮರಳಿದ್ದಾರೆ. ಇಲ್ಲಿ ಸಿಆರ್​ಪಿಎಫ್​ನ ಹಿರಿಯ ಅಧಿಕಾರಿಗಳು ಮತ್ತು ಗೃಹ ಇಲಾಖೆಯ ಕೆಲ ಪ್ರಮುಖ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ನಮ್ಮ ಯೋಧರ ಬಲಿದಾನವನ್ನು ವ್ಯರ್ಥವಾಗಲು ಬಿಡಲಾಗದು. ನಕ್ಸಲರಿಗೆ ತಕ್ಕ ಪಾಠ ಕಲಿಸಬೇಕು ಎಂದು ಸಭೆಯಲ್ಲಿ ಚರ್ಚಿಸಿದ್ದಾರೆ ಎನ್ನಲಾಗಿದೆ.

      ಸಿಲಗುರ್ ಅರಣ್ಯ ವಲಯದಲ್ಲಿ ಸಿಆರ್​ಪಿಫ್​ ಯೋಧರು ಹಾಗೂ ಮಾವೋವಾದಿಗಳ ನಡುವೆ ಭೀಕರ ಗುಂಡಿನ ಕಾಳಗ ನಡೆದಿತ್ತು. ಅದರಲ್ಲಿ 22 ಯೋಧರು ಹುತಾತ್ಮರಾಗಿರುವುದು ಖಚಿತವಾಗಿದೆ. ಇನ್ನೂ 8 ಯೋಧರು ಕಾಣೆಯಾಗಿದ್ದು, ಅವರಿಗಾಗಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಭೀಕರ ದಾಳಿಯಲ್ಲಿ 5ಕ್ಕಿಂತ ಹೆಚ್ಚು ಮಾವೋವಾದಿಗಳೂ ಹತರಾಗಿದ್ದಾರೆ. (ಏಜೆನ್ಸೀಸ್​)


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries