HEALTH TIPS

ರಾಜ್ಯದ ಪ್ರಥಮ ಮತಗಟ್ಟೆ ಕುಂಜತ್ತೂರು ಶಾಲೆಯಲ್ಲಿ ಮತಚಲಾಯಿಸಿದ ಸೇಸಮ್ಮ

                           

           ಮಂಜೇಶ್ವರ: ಕೇರಳ ರಾಜ್ಯದ ಪ್ರಥಮ ಮತಗಟ್ಟೆಯಾಗಿರುವ ಕುಂಜತ್ತೂರು ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತಮ್ಮ ಕುಟುಂಬದ 7 ಮಂದಿ ಸದಸ್ಯರೊಂದಿಗೆ ಸೇಸಮ್ಮ ತಮ್ಮ ಮತಚಲಾಯಿಸಿದರು.

            ಈ ಹಿಂದೆ ಕರ್ನಾಟಕದ ಮತದಾರರಾಗಿದ್ದ ಇವರ ಕುಟುಂಬ ಕಳೆದ 6 ವರ್ಷಗಳಿಂದ ಕೇರಳ ರಾಜ್ಯದ ಮತದಾರರಾಗಿದ್ದಾರೆ. ಕುಂಜತ್ತೂರು ಕುಚ್ಚಿಕಟ್ಟೆ ನಿವಾಸಿ ಸೇಸಮ್ಮ ಕುಂಜತ್ತೂರು ಶಾಲೆಯ ಪ್ರಥಮ ನಂಬ್ರ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಭಾಷಾ ಅಲ್ಪಸಂಖ್ಯಾತ ಪ್ರದೇಶ ಮಂಜೇಶ್ವ ವಿಧಾನಸಭೆ ಕ್ಷೇತ್ರದಲ್ಲಿ ಕುಂಜತ್ತೂರು ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ 6 ಮತಗಟ್ಟೆಗಳಿದ್ದು,  ಒಂದನೇ ನಂಬ್ರ ಮತಗಟ್ಟೆಯಲ್ಲಿ 366 ಮಂದಿ ಮತದಾತರಿದ್ದರು. ಇಲ್ಲಿ ಕನ್ನಡದಲ್ಲಿ ಎಲ್ಲ ಮಾಹಿತಿಗಳನ್ನು ನೀಡಲಾಗಿತ್ತು.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries