HEALTH TIPS

ವೈದ್ಯಕೀಯಆಮ್ಲಜನಕ ಸಿಲಿಂಡರ್‌ಗಳನ್ನು ಸಾಗಿಸುವ ವಾಹನಗಳನ್ನು ಗಡಿಯಲ್ಲಿ ನಿರ್ಬಂಧಿಸಬಾರದು: ಕೇಂದ್ರದಿಂದ ಸೂಚನೆ

 
       ನವದೆಹಲಿ: ವೈದ್ಯಕೀಯ ಆಮ್ಲಜನಕ ಸಿಲಿಂಡರ್‌ಗಳನ್ನು ಸಾಗಿಸುವ ವಾಹನಗಳನ್ನು ತಡೆಹಿಡಿದು ನಿಲ್ಲಿಸಬಾರದು ಎಂದು ಕೇಂದ್ರ ನಿರ್ದೇಶನ ನೀಡಿದೆ.  ವೈದ್ಯಕೀಯ ಆಮ್ಲಜನಕವನ್ನು ಇತರ ರಾಜ್ಯಗಳಿಗೆ ಸಾಗಿಸುವ ವಾಹನಗಳನ್ನು ಗಡಿಯಲ್ಲಿ ನಿರ್ಬಂಧಿಸಬಾರದು ಎಂದು ಕೇಂದ್ರ ಹೇಳಿದೆ.  ಕೇಂದ್ರ ಸರ್ಕಾರವು ಈ ಬಗ್ಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆಗಳನ್ನು ನೀಡಿದೆ.
       ವಿವಿಧ ರಾಜ್ಯಗಳ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಲಿಂಡರ್‌ಗಳ ಲಭ್ಯತೆ ಕ್ಷೀಣಿಸುತ್ತಿದೆ ಎಂಬ ದೂರುಗಳು ಬಂದಿವೆ.  ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಂತಹ ತುರ್ತು  ನಿರ್ಧಾರ ತೆಗೆದುಕೊಳ್ಳಲಾಗಿದೆ.  ಕಂಪನಿಗಳು ಹತ್ತಿರದ ನಗರಗಳಲ್ಲಿನ ಆಸ್ಪತ್ರೆಗಳಿಗೆ ಆಮ್ಲಜನಕ ಸಿಲಿಂಡರ್‌ಗಳನ್ನು ಪೂರೈಸಲು ಪ್ರಯತ್ನಿಸಬೇಕು ಎಂದು ಕೇಂದ್ರ ಸೂಚಿಸಿದೆ.  ದೇಶದಲ್ಲಿ ವೈದ್ಯಕೀಯ ಉಪಕರಣಗಳ ವಿತರಣೆಯನ್ನು ಪ್ರಧಾನಿ ನಿನ್ನೆ ಪರಿಶೀಲಿಸಿದ್ದರು. 
       ಇತ್ತೀಚಿನ ಕೆಲವು ವಾರಗಳಲ್ಲಿ ಕೋವಿಡ್ ವ್ಯಾಪಕಗೊಳ್ಳುತ್ತಿದೆ. ಪರಿಣಾಮವಾಗಿ ಈ ಕಾರಣದಿಂದ   ತೀವ್ರವಾದ ಕೊರೋನಾ ಸೋಂಕಿನ ರೋಗಿಗಳಿಗೆ ಕೃತಕ ಆಮ್ಲಜನಕ ಅತ್ಯಗತ್ಯ.  ಇದನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಉತ್ಪಾದನೆ ಮತ್ತು ಪೂರೈಕೆ ಹೆಚ್ಚಳಗೊಂಡಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries