ತ್ರಿಶೂರ್: ಹೆಚ್ಚುತ್ತಿರುವ ಕೋವಿಡ್ ಹರಡುವಿಕೆಯಿಂದ ಭಕ್ತರಿಗೆ ವಿಶುಕಣಿ ದರ್ಶನಕ್ಕಾಗಿ ಗುರುವಾಯೂರ್ ದೇವಸ್ಥಾನಕ್ಕೆ ಭೇಟಿ ನೀಡಲು ಅವಕಾಶವಿರುವುದಿಲ್ಲ. ವಿಶುವನ್ನು ಆಚರಿಸಲು ಭಕ್ತರಿಗೆ ವಿಶೇಷ ಅನುಮತಿ ನೀಡಬಾರದು ಮತ್ತು ಈಗಿರುವ ನಿರ್ಬಂಧಗಳು ಮುಂದುವರಿಸಲು ನಿರ್ಧರಿಸಲಾಗಿದೆ. ವಿಶುಕಣಿ ದರ್ಶನ ಸಾಂಕೇತಿಕವಾಗಿ ಮಾತ್ರ ನಡೆಯಲಿದೆ.
ಏತನ್ಮಧ್ಯೆ, ದೇವಾಲಯದ 500 ಮೀಟರ್ ಪರಿಧಿಯಲ್ಲಿ ಜನರ ಪ್ರವೇಶಿಸುವ ಅವಕಾಶ ನೀಡದಿರುವ ನಿರ್ಧಾರ ಮುಂದುವರಿಯುತ್ತದೆ. ಹಬ್ಬದ ಸಮಯದಲ್ಲಿ ನಿರ್ಬಂಧಗಳ ಹೊರತಾಗಿಯೂ ಸುಮಾರು 5,000 ಭಕ್ತರು ಅರಾಟ್ ಮತ್ತು ಪಲ್ಲಿವೆಟ್ಟಾಗೆ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ ಎಂಬ ಗುಪ್ತಚರ ವರದಿಗಳ ಆಧಾರದ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗುವುದು.