ಕಣ್ಣೂರು: ಕಣ್ಣೂರಿನಲ್ಲಿ ಎನ್‍ಡಿಎ ಮಹಿಳಾ ಅಭ್ಯರ್ಥಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಪೆರಾವೂರ್ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಸ್ಮಿತಾ ಜಯಮೋಹನ್ ಬೆದರಿಕೆಗೆ ಹಾಕಲಾಗಿದೆ. ಬಿಜೆಪಿ ಜಿಲ್ಲಾ ಸಮಿತಿ ಕಚೇರಿಗೆ ಸ್ಮಿತಾ ಜಯಮೋಹನ್ ಅವರನ್ನು ಕೊಲ್ಲಲಾಗುವುದು ಎಂದು ಪತ್ರವೊಂದನ್ನು ಕಳಿಸಲಾಗಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.
ಬಿಜೆಪಿ ನಾಯಕತ್ವ ಜಿಲ್ಲಾಧಿಕಾರಿಗೆ ದೂರು ನೀಡಿದೆ. ಸಿಪಿಎಂ ಭದ್ರಕೋಟೆಗಳಾದ ಮುಡಾಕೋಝಿಮಲಾ ಮತ್ತು ಮುಡಾಕೋಝಿಯಲ್ಲಿ ಪ್ರಚಾರ ಮಾಡುತ್ತಿದ್ದ ಸ್ಮಿತಾ ಜಯಮೋಹನ್ ಅವರನ್ನು ಕ್ಷೇತ್ರದ ರಾಜಕೀಯ ವಿವಾದದಲ್ಲಿ ಸಿಪಿಎಂ ಪಕ್ಷದ ಕಾರ್ಯಕರ್ತರು ತಡೆಹಿಡಿದರು.
ಘಟನೆಯ ಬಗ್ಗೆ ದೂರು ನೀಡಿರುವ ಬಿಜೆಪಿ ತೀವ್ರ ಪ್ರತಿಭಟನೆ ನಡೆಸಿತು. ಇದರ ನಂತರ ಅಭ್ಯರ್ಥಿಯ ಪ್ರಚಾರ ಸಮಾಗ್ರಿಗಳನ್ನು ಸಿಪಿಎಂ ನಾಶಗೊಳಿಸಿತ್ತು. ಇದರ ಬೆನ್ನಿಗೇ ಜಿಲ್ಲಾ ಬಿಜೆಪಿ ಕಚೇರಿಗೆ ಅಜ್ಞಾತ ಪತ್ರದ ಮೂಲಕ ಬೆದರಿಗೆ ವ್ಯಕ್ತಪಡಿಸಲಾಗಿದೆ.