ತಿರುವನಂತಪುರ: ಮೇ ಮಧ್ಯದ ವೇಳೆಗೆ ಕೋವಿಡ್ ಬಾಧಿತರ ಸಂಖ್ಯೆ ಗರಿಷ್ಠಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ ಎಂಬ ಪೆÇ್ರಜೆಕ್ಷನ್ ವರದಿಯ ಆಧಾರದ ಮೇಲೆ ವೈದ್ಯಕೀಯ ಸೌಲಭ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಂಡಿದೆ.
ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ಸೇವೆಯನ್ನು ವೈದ್ಯರ ಕೊರತೆಯಿರುವಲ್ಲಿ ಬಳಸಿಕೊಳ್ಳುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ದೇಶನ ನೀಡಿದರು.
ಮೇ 11 ರಿಂದ 15 ರವರೆಗೆ ಗರಿಷ್ಠಗೊಳ್ಳುತ್ತದೆ ಮತ್ತು ನಂತರ ಕುಸಿಯುತ್ತದೆ. ಆ ಸಂದರ್ಭ ಕೋವಿಡ್ ಚಿಕಿತ್ಸೆಯಲ್ಲಿ ಸುಮಾರು ನಾಲ್ಕು ಲಕ್ಷ ಜನರ ವರೆಗೆ ಬಂದು ತಲಪುತ್ತದೆ. ತಿರುವನಂತಪುರ, ಎರ್ನಾಕುಳಂ, ಮಲಪ್ಪುರಂ ಮತ್ತು ಕೋಝಿಕೋಡ್ ಜಿಲ್ಲೆಗಳಲ್ಲಿ, ಮೇ ಅಂತ್ಯದವರೆಗೆ ಈ ಸಂಖ್ಯೆ ಮುಂದುವರಿಯುವ ಸಾಧ್ಯತೆಯಿದೆ.
ಕಳೆದ 19 ರಂದು ಸಿದ್ಧಪಡಿಸಿದ ಮೊದಲ ವರದಿಯ ಪ್ರಕಾರ, ಮೇ ಎರಡನೇ ವಾರದಲ್ಲಿ 2.18 ಲಕ್ಷ ಜನರಿಗೆ ಚಿಕಿತ್ಸೆ ನೀಡ ಬೇಕಾಗಿ ಬರಬಹುದೆಂದು ಅಂದಾಜಿಸಲಾಗಿದೆ. ಆದಾಗ್ಯೂ, ಗುಂಪು ಪರೀಕ್ಷೆಯ ಫಲಿತಾಂಶಗಳು ಪ್ರಕಟಗೊಂಡ ಬಳಿಕ ಈ ವರದಿಯನ್ನು ನವೀಕರಿಸಲಾಗಿದೆ.
ರಾಜ್ಯದಲ್ಲಿ ಕೋವಿಡ್ ಹರಡುವಿಕೆಯ ಪ್ರಮಾಣ (ರಿಪ್ರೊಡಕ್ಷನ್ ರೇಟ್-ಆರ್)2.5 ಆಗಿದೆ. ಆಲಪ್ಪುಳ, ತಿರುವನಂತಪುರ, ಪತ್ತನಂತಿಟ್ಟು, ಕೊಟ್ಟಾಯಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ ಮತ್ತು ಕೋಝಿಕೋಡ್ ಜಿಲ್ಲೆಗಳಲ್ಲಿ ಅತಿ ಹೆಚ್ಚು ಆರ್ ದರ ಹೆಚ್ಚಿದೆ. ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಇದು ಕಡಿಮೆ. ಸಾಪ್ತಾಹಿಕ ಸರಾಸರಿ ಹೆಚ್ಚಳ ದರ 150 ಶೇ. ಆಗಿದೆ.
ಹೆಚ್ಚು ಪರಿಣಾಮ ಬೀರುವ ಕೋಝಿಕೋಡ್ ಸೇರಿದಂತೆ ಜಿಲ್ಲೆಗಳಲ್ಲಿ ಹಾಸಿಗೆಗಳು ಮತ್ತು ಐಸಿಯುಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಸೂಚಿಸಲಾಗಿದೆ. ಆಮ್ಲಜನಕದ ಕೊರತೆಯ ವರದಿಗಳ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲು ಕಾಸರಗೋಡು ಜಿಲ್ಲೆಯ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ. ವಿಪತ್ತು ನಿರ್ವಹಣಾ ಪ್ರಾಧಿಕಾರದ ಪೆÇ್ರಜೆಕ್ಷನ್ ವರದಿಯು ಮೇ ಮಧ್ಯದ ವೇಳೆಗೆ ಕೋವಿಡ್ ಗೆ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ನಾಲ್ಕು ಲಕ್ಷ ಮೀರಲಿದೆ ಎಂದು ಎಚ್ಚರಿಸಿದೆ.
ದಿನಕ್ಕೆ ಕೋವಿಡ್ ಬಾಧಿತರಾಗುವವರ ಸಂಖ್ಯೆ ಅರ್ಧ ಲಕ್ಷಕ್ಕೂ ಹೆಚ್ಚು ತಲುಪಬಹುದು. ಅಂತಹ ಪರಿಸ್ಥಿತಿಯಲ್ಲಿ, ಅಸ್ತಿತ್ವದಲ್ಲಿರುವ ಆಸ್ಪತ್ರೆ ಸೌಲಭ್ಯಗಳು ಸಾಕಾಗಲಾರದು. ಈ ಸಂದರ್ಭದಲ್ಲಿ ಸಮರೋಪಾದಿಯ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತದೆ.