HEALTH TIPS

ಡಾಲರ್‌ ಕಳ್ಳಸಾಗಣೆ ಪ್ರಕರಣ:ಸ್ಪೀಕರ್ ಹೇಳಿಕೆ ದಾಖಲು

       ತಿರುವನಂತಪುರ: ಡಾಲರ್‌ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಕಸ್ಟಮ್ಸ್‌ ಅಧಿಕಾರಿಗಳು, ರಾಜ್ಯ ವಿಧಾನಸಭೆ ಸ್ಪೀಕರ್ ಪಿ.ಶ್ರೀರಾಮಕೃಷ್ಣನ್‌ ಅವರ ಹೇಳಿಕೆಯನ್ನು ಶನಿವಾರ ಅವರ ನಿವಾಸದಲ್ಲಿ ದಾಖಲಿಸಿದರು.

         ಅನಾರೋಗ್ಯದ ಕಾರಣ ನಾನು ಬರಲಾಗದು ಎಂದು ಸ್ಪೀಕರ್ ತನಿಖಾ ಅಧಿಕಾರಿಗಳಿಗೆ ತಿಳಿಸಿದ್ದರು. 'ಡಾಲರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಕೆಲ ವಿವರಣೆ ಬಯಸಿದ್ದು, ಎರಡು ಗಂಟೆ ಕಾಲ ನಿವಾಸದಲ್ಲಿ ಇದ್ದರು. ಸ್ಪೀಕರ್‌ ನೀಡಿದ ಉತ್ತರರಿಂದ ಸಮಾಧಾನಗೊಂಡಿದ್ದಾರೆ' ಎಂದು ಕಚೇರಿಯ ಮೂಲಗಳು ತಿಳಿಸಿವೆ.

       ಅಧಿಕಾರಿಗಳು ಹಿಂದೆ ಮೂರು ಬಾರಿ ನೋಟಿಸ್‌ ನೀಡಿದ್ದರು. ಆದರೆ, ಸ್ಪೀಕರ್ ಹಾಜರಾಗಿರಲಿಲ್ಲ. ತಿರುವನಂತಪುರ ದಲ್ಲಿರುವ ಯುಎಇ ಕಾನ್ಸುಲೇಟ್‌ನ ಮಾಜಿ ಹಣಕಾಸು ಅಧಿಕಾರಿಯು ಮಸ್ಕಟ್‌ನಿಂದ ಒಮನ್‌ಗೆ 1.9 ಲಕ್ಷ ಡಾಲರ್ (ಸುಮಾರು ₹ 1.30 ಕೋಟಿ) ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries