ಮಲಪ್ಪುರಂ: ದ್ವಿಚಕ್ರ ವಾಹನಕ್ಕೆ ನಾಯಿಯನ್ನು ಕಟ್ಟಿ ಎಳೆದೊಯ್ದಿದ್ದ ಕ್ಸೇವಿಯರ್ ಎಂಬಾತನನ್ನು ಉತ್ತರ ಕೇರಳ ಎಡಕ್ಕರಾದಲ್ಲಿ ಶನಿವಾರ ಪೊಲೀಸರು ಬಂಧಿಸಿದ್ದಾರೆ. ಇವರ ವಿರುದ್ಧ ಪ್ರಾಣಿಹಿಂಸೆ ನಡೆಸಿದ ಕುರಿತು ಪ್ರಕರಣ ದಾಖಲಾಗಿದೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಬಂಧಿತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ನಾಯಿ ಒಮ್ಮೆ ಈತನ ಚಪ್ಪಲಿಯನ್ನು ಕಚ್ಚಿತ್ತು. ಹೀಗಾಗಿ, ಆರೋಪಿಯು ಆಗಿಂದಾಗ್ಗೆ ಇಂತಹ ಕೃತ್ಯವನ್ನು ಎಸಗುತ್ತಿದ್ದ. ಇದನ್ನು ಗಮನಿಸಿದ್ದ ಸಾರ್ವಜನಿಕರೊಬ್ಬರು ನಾಯಿಯನ್ನು ಕಟ್ಟಿ ಎಳೆಯುತ್ತಿದ್ದನ್ನು ವಿಡಿಯೊ ಮಾಡಿ ಹಾಕಿದ್ದರು.
ನಾಯಿಯನ್ನು ಆಸ್ಪತ್ರೆಗೆ ಒಯ್ಯಲಾಗಿದೆ. ನಾಲ್ಕು ತಿಂಗಳ ಹಿಂದೆ ಕೊಚ್ಚಿಯಲ್ಲಿ ನಾಯಿ ಮರಿಯೊಂದನ್ನು ಕಾರಿಗೆ ಕಟ್ಟಿ ಎಳೆದೊಯ್ಯಲಾಗಿತ್ತು. ಆಗಲೂ ಆರೋಪಿಯನ್ನು ಬಂಧಿಸಲಾಗಿತ್ತು.