ತಿರುವನಂತಪುರ: ಕೊರೋನಾ ಸೋಂಕು ಬಾಧಿತರಾದ ವಿಧಾನಸಭೆಯ ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರನ್ನು ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಸ್ಪೀಕರ್ ಗೆ ನಿನ್ನೆಯಷ್ಟೇ ಕೊರೋನಾ ದೃಢಪಡಿಸಲಾಗಿತ್ತು. ಡಾಲರ್ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಕಸ್ಟಮ್ಸ್ ಪ್ರಶ್ನಿಸಿದ್ದು, ಅಲ್ಪಹೊತ್ತಲ್ಲಿ ಕೊರೋನಾ ದೃಢಪಡಿಸಿರುವುದಾಗಿ ಸ್ಪೀಕರ್ ಫೇಸ್‍ಬುಕ್‍ನಲ್ಲಿ ಘೋಷಿಸಿದರು. ಪ್ರಶ್ನಿಸಿದ ಕಸ್ಟಮ್ಸ್ ಅಧಿಕಾರಿಗಳೂ ಇದೀಗ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
ಇದರೊಂದಿಗೆ, ಡಾಲರ್ ಕಳ್ಳಸಾಗಣೆಗೆ ಸಂಬಂಧಿಸಿದ ಪ್ರಕರಣದ ತನಿಖೆಯಲ್ಲಿ ವಿಳಂಬವಾಗಲಿದೆ. ಸ್ಪೀಕರ್ ಹೇಳಿಕೆಯ ಆಧಾರದ ಮೇಲೆ ತ್ವರಿತ ತನಿಖೆ ನಡೆಸುವುದು ಕಸ್ಟಮ್ಸ್ ನ ಯೋಚನೆಯಾಗಿತ್ತು.