ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹಾವಳಿ ಅಧಿಕಗೊಂಡಿದ್ದು, ಡೆಸ್ಟ್ ಪಾಸಿಟಿವಿಟಿ ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸÀರ್ಕಾರ ಘೋಷಿಸಿರುವ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗುವುದು ಎಂದು ಜಿಲ್ಲಾ ಪಿಡುಗು ನಿವಾರಣೆ ಪ್ರಾಧಿಕಾರ ಸಭೆ ತಿಳಿಸಿದೆ.
ಆನ್ ಲೈನ್ ಮೂಲಕ ನಡೆದ ಸಭೆಯಲ್ಲಿ ಪ್ರಾಧಿಕಾರದ ಅಧ್ಯಕ್ಷ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಪ್ರತಿರೋಧ ಚಟುವಟಿಕೆಗಳನ್ನು ಜಿಲ್ಲೆಯಲ್ಲಿ ಚುರುಕುಗೊಳಿಸಲು ಸಭೆ ತೀರ್ಮಾನಿಸಿದೆ. ಕೋವಿಡ್ ಸೋಂಕು ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ 59 ವೆಂಟಿಲೇಟರ್, 114 ಐ.ಸಿ.ಯತು.ಬೆಡ್, 1101 ಆಕ್ಸಿಜನ್ ಬೆಡ್, 589 ಸಾದಾರಣ ಬೆಡ್ ಇತ್ಯಾದಿಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಗುರುವಾರ ಹೆಚ್ಚುವರಿ 2 ವೆಂಟಿಲೇಟರ್ ಸ್ಥಾಪನೆಗೊಳ್ಳಲಿದೆ.
ಜಿಲ್ಲೆಯಲ್ಲಿ ಅನಿವಾರ್ಯವಾಗಿರುವ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ ಸಂಬಂಧ ಜಿಲ್ಲಾ ಯೋಜನೆ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಕೋವಿಡ್ ಸಂಹಿತೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡುವಲ್ಲಿ ಪೆÇಲೀಸ್ ಕ್ರಮ ಬಿಗಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ತಿಳಿಸಿದರು.
ಎಲ್ಲ ಗ್ರಾಮ ಪಂಚಾಯತ್ ಗಲಲ್ಲಿ ಆಕ್ಸಿಜನ್ ಕಾನ್ಸ್ ಸ್ಟ್ರಾಟರ್ ಸ್ಥಾಪನೆಗೆ ಜಿಲ್ಲಾ ಪಂಚಾಯತ್ ನಿಧಿ ಮಂಜೂರು ಮಾಡಿತ್ತು. ಆದರೆ 22 ಮಾತ್ರ ಈ ವರೆಗೆ ಕೆ.ಎಂ.ಸಿ.ಎಲ್. ವಿತರಿಸಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್ ತಿಳಿಸಿದರು.
ಪ್ರತಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲೂ ತಲಾ 4 ತಂಡಗಳು ಕೋವಿಡ್ ಸಂಹಿತೆ ಪಾಲನೆಗಾಗಿ ನೇಮಕಗೊಂಡಿವೆ. ಆರಾಧನಾಲಯಗಳಲ್ಲಿ ಗರಿಷ್ಠ 50 ಮಂದಿಗೆ ಅನುಮತಿಯಿದೆ. 2 ಮೀಟರ್ ಸಾಮಾಜಿಕ ಅಂತರ ಖಚಿತಪಡಿಸಬೇಕು. ಕೋವಿಡ್ ಜಾಗ್ರತಾ ಪೆÇೀರ್ಟಲ್ ನಲ್ಲಿ ನೋಂದಣಿ ನಡೆಸಿ ನಡೆಸಲಾಗುವ ವಿವಾಹಗಳಲ್ಲಿ 50 ಮಂದಿ, ಮರಣ ಸಂಬಂಧಿ ಸಮಾರಂಭಗಳಲ್ಲಿ ಗರಿಷ್ಠ 20 ಮಂದಿಭಾಗವಹಿಸಲು ಅನುಮತಿಯಿದೆ. ಸಾರ್ವಜನಿಕ ಸಮಾರಂಭಗಳಿಗೆ ಮಂಜೂರಾತಿಯಿಲ್ಲ ಎಂದು ಸಭೆ ತಿಳಿಸಿದೆ.