ಕಾಸರಗೋಡು: ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರ ಪಟ್ಟಿಯಲ್ಲಿ ಅನರ್ಹರ ಹೆಸರು ಸೇರ್ಪಡೆಗೊಂಡಿರುವುದರಿಂದ ಸಂತ್ರಸ್ತರನ್ನು ಪುನ: ಆರೋಗ್ಯ ತಪಾಸಣೆಗೊಳಪಡಿಸಬೇಕೆಂಬ ಸರ್ಕಾರದ ನಿಲುವು, ಮಕ್ಕಳಮೇಲಿನ ದೌರ್ಜನ್ಯ ಹಾಗೂ ಮಾನವಹಕ್ಕುಗಳ ಉಲ್ಲಂಘನೆಯಾಗಲಿರುವುದಾಗಿ ಪ್ರಮುಖ ಪರಿಸರ ಹಾಗೂ ಸಾಮಾಜಿಕ ಹೋರಾಟಗಾರ್ತಿ ದಯಾಬಾಯಿ ತಿಳಿಸಿದ್ದಾರೆ.
ಅವರು ಶುಕ್ರವಾರ ಕಾಸರಗೋಡಿನ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರ ಒಕ್ಕೂಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ನಡೆಸಲಾದ ವೈದ್ಯಕೀಯ ಶಿಬಿರದಲ್ಲಿ ಆಯ್ಕೆಯಾಗಿ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಂಡವರನ್ನು ಸರ್ಕಾರ ಅಪಮಾನಿಸಬಾರದು ಎಂದು ತಿಳಿಸಿದರು. ಎಂಡೋಸಲ್ಫಾನ್ ವಿರುದ್ಧ ಹೋರಾಟದ ಮುಂಚೂಣಿ ನಾಯಕ ಅಂಬಿಕಾಸುತನ್ ಮಾಙËಡ್ ಮಾತನಾಡಿ, ಎಂಡೋಸಲ್ಫಾನ್ ದುಷ್ಪರಿಣಾಮದಿಂದ ಸಮಸ್ಯೆ ಅನುಭವಿಸುತ್ತಿರುವರಿಗೆ ನ್ಯಾಯ ಒದಗಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ತಿಳಿಸಿದರು. ಮುನಿಸಾ ಅಂಬಲತ್ತರ ಅಧ್ಯಕ್ಷತೆ ವಹಿಸಿದ್ದರು. ಜಮೀಳಾ ಒಲೆಯತ್ತಡ್ಕ, ಜೋಸ್‍ಮಾವೇಲಿ, ಸುಲೈಖಾಮಾಹಿನ್, ಫರೀನಾ ಕೋಟ್ಟಪುರಂ, ಪಿ.ಕೃಷ್ಣನ್, ಕೆ.ಶಿವಕುಮಾರ್, ಟಿ.ಶೋಭನಾ, ಶ್ರೀನಾಥ್, ಶಶಿ, ರಾಮಕೃಷ್ಣನ್ ಉಪಸ್ಥಿತರಿದ್ದರು. ಅಂಬಲತ್ತರ ಕುಞÂಕೃಷ್ಣನ್ ಸ್ವಾಗತಿಸಿದರು. ಪುಷ್ಪಾ ಚಟ್ಟಂಚಾಲ್ ವಂದಿಸಿದರು.