ಮುಳ್ಳೇರಿಯ: ಪೆರಿಯದ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಭೂವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳಾದ ಕೊಟ್ಟಾಯಂ ತಟ್ಟಕ ನಿವಾಸಿ ಕು.ಅಮ್ಮುಸ್ ಕೆ. ಜಯನ್ ಮತ್ತು ಕಾಸರಗೋಡು ಕಾರಡ್ಕ ನಿವಾಸಿ ಕು. ಶ್ರೀವಿದ್ಯಾ ಇ. ಎಂಬ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಲಂಡನ್ ಮೂಲದ ಮೈಕ್ರೊಪಲಾಂಥೋಲಾಜಿಕಲ್ ಸೋಸೈಟಿಯ ಫೆಲೋಶಿಪ್ ಅವಾರ್ಡಿಗೆ ಪಾತ್ರರಾಗಿದ್ದಾರೆ.
ಅಮ್ಮುಸ್ ಕೆ. ಜಯನ್ ಅವರು ಬಂಗಾಲಕೊಲ್ಲಿಯಲ್ಲಿ ಭಾರತದ ಮುಂಗಾರುವಿನ ಬದಲಾವಣೆಯ ಕುರಿತಾದ ಅಧ್ಯಯನದ ವಿಷಯದಲ್ಲೂ, ಶ್ರೀವಿದ್ಯಾ ಇ, ಅವರಿಗೆ ಓಷನ್ ಅಸಿಡಿಫಿಕೇಷನ್ ಇನ್ ಪಾಸ್ಟ್ ಯೂಸಿಂಗ್ ಟೆರೋಪೆÇೀಡ್ಸ್ ಕುರಿತಾದ ಅಧ್ಯಯನಕ್ಕೂ ಫೆಲೋಶಿಪ್ ಗೆ ಆಯ್ಕೆಯಾಗಿರುವರು.
ಸಂಶೋಧನಾ ವಿಷಯಗಳಿಗಾಗಿ ವಿದೇಶ ರಾಷ್ಟ್ರಗಳ ಭೇಟಿ ಮತ್ತು ಪೀಲ್ಡ್ ವರ್ರ್ಕಗಳಿಗಾಗಿ ಈರ್ವರಿಗೂ 500 ಪೌಂಡ್ (ಅಂದಾಜು ರೂ.52,000) ಫೆಲೋಶಿಪ್ ಮೊತ್ತ ಲಭಿಸಲಿದೆ. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಭೂವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಿಜಿನ್ ಕುಮಾರ್ ಎ.ವಿ. ಅವರ ಮಾರ್ಗದರ್ಶನದಲ್ಲಿ ಈ ಇಬ್ಬರು ವಿದ್ಯಾರ್ಥಿಗಳು ಸಂಶೋಧನೆ ನಡೆಸುತ್ತಿದ್ದಾರೆ.