ಆಲಪ್ಪುಳ: ಏಪ್ರಿಲ್ 1 ರ ಮೂರ್ಖರ ದಿನದಂದು ತನ್ನ ಸ್ನೇಹಿತರನ್ನು ಪೇಚಿಗೆ ಸಿಲುಕಿಸಲು ನೇಣು ಹಾಕಿಕೊಂಡಂತೆ ನಟಿಸುವಾಗ ಬೆಡ್ಶೀಟ್ ಕುತ್ತಿಗೆಗೆ ಸಿಲುಕಿಕೊಂಡು ವಿದ್ಯಾರ್ಥಿಯೊಬ್ಬ ದಾರುಣನಾಗಿ ಮೃತಪಟ್ಟ ಘಟನೆ ನಡೆದಿದೆ. ಮೃತನನ್ನು ಕೇಲಮಂಗಲಂ ಮೂಲದ ಸಿಧು ಯಾನೆ ಸಿದ್ದಾರ್ಥ ಎಂದು ಗುರುತಿಸಲಾಗಿದೆ. ಸಿಧು ಕುತ್ತಿಗೆಗೆ ಹಗ್ಗ ಹಾಕುವ ದೃಶ್ಯಗಳನ್ನು ಆತನ ಸ್ನೇಹಿತರಿಗೆ ಸೋಷಿಯಲ್ ಮೀಡಿಯಾದಲ್ಲಿ ನೇರಪ್ರಸಾರ ಮಾಡಲಾಗಿತ್ತು.
ತಲವಾಡಿ ಕಿಳಿರೂರಿನ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದೆ. ಕೋಣೆಯಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡಿದ್ದ ಸಿಧುವನ್ನು ಆತನ ತಾಯಿ ಲಿಖಿತರ ಗಮನಕ್ಕೆ ಮೊದಲು ಬಂತು. ಆಟವಾಡಲು ತಾಯಿಯ ಮೊಬೈಲ್ ಪೋನ್ ಕೇಳಿ ಪಡೆದಿದ್ದ ಸಿಧು ಬಹಳ ಸಮಯದ ಬಳಿಕವೂ ಪತ್ತೆಯಿಲ್ಲದ್ದರಿಂದ ತಾಯಿ ಹುಡುಕಾಡಿ ಕೊನೆಗೆ ಕೋಣೆಯ ಬಾಗಿಲನ್ನು ಸರಿಸಿದಾಗ ನೇಣು ಬಿಗಿದಿರುವುದು ಕಂಡುಬಂತು. ಬೆಡ್ಶೀಟ್ ಬಳಸಿ ಕುತ್ತಿಗೆ ಬಿಗಿದಿದ್ದ ಸಿಧುವನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಕೋಣೆಯಲ್ಲಿ ಲೈವ್-ಚಿತ್ರೀಕರಿಸಿದ ಮೊಬೈಲ್ ಫೆÇೀನ್ ಕಂಡುಬಂದಿದೆ. ಸಿಧು ಗ್ರೀನ್-ಚೆಕ್ಕಿಕ್ಕಕ್ಕಾಡ್ ಲೌರ್ಡೆಸ್ ಮಾತಾ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿ.