ಕಾಸರಗೋಡು: ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇತರ ಸ್ಥಳೀಯ ಸಂಸ್ಥೆಗಳ ಸಹಾಯದೊಂದಿಗೆ ಕಸರಗೋಡು ಜಿಲ್ಲಾ ಪಂಚಾಯತ್ ನೇತೃತ್ವದಲ್ಲಿ ಚಟ್ಟಂಚಲ್‌ನಲ್ಲಿ ಆಮ್ಲಜನಕ ಘಟಕವನ್ನು ಸ್ಥಾಪಿಸಲು ನಿರ್ಣಯಿಸಲಾಗಿದೆ.
ಜಿಲ್ಲಾ ಪಂಚಾಯತ್ ಚಟ್ಟಂಚಲ್ ಕೈಗಾರಿಕಾ ಉದ್ಯಾನವನದಲ್ಲಿ ಭೂಮಿ ಗುರುತಿಸಿ 50 ಲಕ್ಷ ರೂ. ವೆಚ್ಚದಲ್ಲಿ ಆಮ್ಲಜನಕ ಘಟಕ ನಿರ್ಮಿಸಲಿದ್ದು, ಜಿಲ್ಲಾ ಯೋಜನಾ ಸಮಿತಿಯ ಅನುಮತಿಯೊಂದಿಗೆ ಆಮ್ಲಜನಕ ಘಟಕವನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ತಲಾ 3 ಲಕ್ಷವನ್ನು ಗ್ರಾಮ ಪಂಚಾಯಿತಿಗಳು ಮತ್ತು `5 ಲಕ್ಷವನ್ನು ಬ್ಲಾಕ್ ಪಂಚಾಯಿತಿಗಳು ಮತ್ತು ನಗರಸಭೆಗಳು ಒದಗಿಸಲಿವೆ.
ಲಸಿಕೆ ಅಲಭ್ಯತೆಯ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ 50 ಲಕ್ಷ ರೂ ನೀಡಲಿದೆ. ಸಿ.ಎಂ.ಲಸಿಕೆ ಸವಾಲಿಗೆ ಜಿಲ್ಲಾ ಪಂಚಾಯತ್ ಸದಸ್ಯರಿಲು ತಮ್ಮ ಒಂದು ತಿಂಗಳ ಗೌರವ ಧನ ನೀಡಲು ಜಿಲ್ಲಾ ಪಂಚಾಯತ್ ನಿರ್ಧರಿಸಿದೆ.
ಮೇ 1 ರಿಂದ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಸಹಯೋಗದೊಂದಿಗೆ ಮನೆಯಲ್ಲಿರುವ ರೋಗಿಗಳಿಗೆ ಕೋವಿಡ್ ಲಸಿಕೆ ಯೋಜನೆಯನ್ನು ಜಾರಿಗೆ ತರಲಿದೆ. ಬಳಿಕ ಲಸಿಕೆಯನ್ನು ವಿಕಲಾಂಗ ಸದಸ್ಯರಿಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಬೇಬಿ ಬಾಲಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.