ಕೊಚ್ಚಿ:ಮತ ಎಣಿಕೆ ದಿನವಾದ ಮೇ.2 ರಂದು ರಾಜ್ಯದಲ್ಲಿ ಯಾವುದೇ ಲಾಕ್ ಡೌನ್ ವಿಧಿಸಲಾಗುವುದಿಲ್ಲ ಎಂದು ಹೈಕೋರ್ಟ್ ಇಂದು ತಿಳಿಸಿದೆ .
ಕೋವಿಡ್ ವ್ಯಾಪನದ ಹಿನ್ನೆಲೆಯಲ್ಲಿ ವಿಜಯೋತ್ಸವ ಮೆರವಣಿಗೆ, ರಾಜಕೀಯ ದೊಂಬಿಗಳಿಗೆ ಆಸ್ಪದ ನೀಡಬಾರದೆಂದು ಮನವಿ ಮೂಲಕ ಮೇ 2 ರಂದು ಲಾಕ್ ಡೌನ್ ಕೋರಿ ಹಲವರು ಹೈಕೋರ್ಟ್‍ಗೆ ಅರ್ಜಿ
ಸಲ್ಲಿಸಿದ್ದರು. ಲಾಕ್ ಡೌನ್ ಕೋರಿ ನ್ಯಾಯಾಲಯಕ್ಕೆ ಮೂರು ಖಾಸಗಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು.