ಕಾಸರಗೋಡು: ಪರಮಪೂಜ್ಯ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಗಳವರ ಷಷ್ಠ್ಯಬ್ದ ಸಂಭ್ರಮ 2021 ಜ್ಞಾನವಾಹಿನಿ ಕಾಸರಗೋಡು ವಲಯ ಸಮಿತಿ ಮತ್ತು ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ನೇತೃತ್ವದಲ್ಲಿ ನಾಲ್ಕನೇ ಸರಣಿ ಕಾರ್ಯಕ್ರಮದಂಗವಾಗಿ ಹರಿಕಥಾ ಸತ್ಸಂಗ, ಹನುಮಾನ್ ಚಾಲಿಸ್ ಪಠಣ ನಡೆಯಿತು.
ಕಾರ್ಯಕ್ರಮದಂಗವಾಗಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಪಾದಂಗಳವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಸರಣಿಯ ನಾಲ್ಕನೇ ಕಾರ್ಯಕ್ರಮಕ್ಕೆ ಸ್ವಾಮೀಜಿಯವರು ದೀಪ ಪ್ರಜ್ವಲನೆಗೈದು ಚಾಲನೆ ನೀಡಿ ಆಶೀರ್ವಚನ ನೀಡಿದರು.
ಹಿರಿಯ ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಅಭ್ಯಾಗತರಾಗಿ ಉದ್ಯಮಿ ರಾಂ ಪ್ರಸಾದ್, ಅಭ್ಯಾಗತರಾಗಿ ನಗರಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ ಉಪಸ್ಥಿತರಿದ್ದರು. ಕಾಸರಗೋಡು ವಲಯ ಸಮಿತಿ ಅಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ ಉಪಸ್ಥಿತರಿದ್ದರು. ಪೇಟೆ ಶ್ರೀ ವೆಂಕಟರಮಣ ಮಹಿಳಾ ಭಜನಾ ಸಂಘದಿಂದ ಹನುಮಾನ್ ಚಾಲಿಸ್ ಪಠಣ ಹಾಗು ಎಸ್.ಪಿ.ಗುರುದಾಸ್ ಮಂಗಳೂರು ಅವರಿಂದ ಹನುಮದ್ಭಕ್ತ ಹರಿಕಥಾ ಸತ್ಸಂಗ ನಡೆಯಿತು.
ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿ, ಕಾರ್ಯಾಧ್ಯಕ್ಷ ಹರಿದಾಸ ಜಯಾನಂದ ಕುಮಾರ್ ಪ್ರಾಸ್ತಾವಿಕ ನುಡಿದರು. ಸಂಘಟನಾ ಕಾರ್ಯದರ್ಶಿ ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.