ತಿರುವನಂತಪುರ: ಕೊರೋನಾ ವಿಸ್ತರಣೆಯ ನಂತರ ಮುಚ್ಚಿದ ಗಡಿಗಳನ್ನು ಮತ್ತೆ ತೆರೆಯುವಂತೆ ಕೇರಳ ಒತ್ತಾಯಿಸಿದೆ. ಕೇರಳ ಮುಖ್ಯ ಕಾರ್ಯದರ್ಶಿ ಈ ಬಗ್ಗೆ ತಮಿಳುನಾಡು ಮುಖ್ಯ ಕಾರ್ಯದರ್ಶಿಗೆ ಪತ್ರ ಕಳುಹಿಸಿದ್ದಾರೆ. ಕನ್ಯಾಕುಮಾರಿ ಜಿಲ್ಲೆಯಲ್ಲಿ 12 ಗಡಿ ರಸ್ತೆಗಳನ್ನು ತೆರೆಯುವ ಅವಶ್ಯಕತೆಯಿದೆ ಮುಂದಿರಿಸಿದೆ.
ಕೇರಳದಲ್ಲಿ ಕೊರೋನಾ ರೋಗಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದ್ದರಿಂದ ತಮಿಳುನಾಡಿನ ಕನ್ಯಾಕುಮಾರಿಯಿಂದ ತಿರುವನಂತಪುರಕ್ಕೆ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಮುಚ್ಚಲಾಗಿದೆ. ಕಾರ್ಯಾಚರಣೆಗೆ ತಮಿಳುನಾಡು ಪೋಲೀಸರು ನೇತೃತ್ವ ವಹಿಸಿದ್ದರು. ರಸ್ತೆಗಳನ್ನು ಮುಚ್ಚುವುದರ ಜೊತೆಗೆ, ಗಡಿ ದಾಟಲು ಇ-ಪಾಸ್‍ಗಳನ್ನು ಕಡ್ಡಾಯಗೊಳಿಸಲಾಗಿದೆ.
ಕುಳತೂರ್ ಪಂಚಾಯತ್ ಬಳಿಯ ಪೆÇಝಿಯೂರ್, ಉಚಕ್ಕಡ, ಕಣ್ಣುವಮೂಡು, ಪಂಚಮಮೂಡು, ವೆಲ್ಲಾರಡ ಮತ್ತು ಅಂಬುರಿ ರಸ್ತೆಗಳನ್ನು ಮುಚ್ಚಲಾಗಿದೆ. ಕನ್ಯಾಕುಮಾರಿಯಿಂದ ತಿರುವನಂತಪುರಕ್ಕೆ ಹೋಗುವ ರಸ್ತೆಯನ್ನೂ ಪೋಲೀಸರು ಮುಚ್ಚಿದ್ದಾರೆ. ಏತನ್ಮಧ್ಯೆ, ಕೊರೋನಾ ಋಣಾತ್ಮಕ ಪ್ರಮಾಣಪತ್ರ ಹೊಂದಿರುವವರಿಗೆ ಕಲಿಯಾಕವಿಲಾ ರಾಷ್ಟ್ರೀಯ ಹೆದ್ದಾರಿ ದಾಟಲು ಅವಕಾಶ ನೀಡಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ.