ತ್ರಿಶೂರ್: ಯಾವುದೇ ಬದಲಾವಣೆಯಿಲ್ಲದೆ ತ್ರಿಶೂರ್ ಪೂರಂ ಸಮಾರಂಭಗಳನ್ನು ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೂರಂ ನಿರ್ವಹಣೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ. ಪೂರಂ ಕಟ್ಟುನಿಟ್ಟಿನ ನಿಬರ್ಂಧದಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ಸವದಲ್ಲಿ ಪಾಲ್ಗೊಳ್ಳುವವರಿಗೆ ಮಾಸ್ಕ್ ಕಡ್ಡಾಯವಾಗಿರುತ್ತದೆ. 45 ವರ್ಷಕ್ಕಿಂತ ಮೇಲ್ಪಟ್ಟ ಜನರು ರೋಗನಿರೋಧಕ ಪ್ರಮಾಣಪತ್ರ ಹಾಜರುಪಡಿಸಬೇಕು. ಪೂರಪರಂಬಿಲ್‍ನಲ್ಲಿ 10 ವರ್ಷಕ್ಕಿಂತ ಕೆಳಗಿನ ಹರೆಯದವ ವಯಸ್ಸಿನ ಮಕ್ಕಳನ್ನು ಅನುಮತಿಸಲಾಗುವುದಿಲ್ಲ. ಪೂರಪರಂಬಿಲ್ ನ್ನು ಪ್ರವೇಶಿಸಲು ಮತ್ತು ನಿಯಂತ್ರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಉತ್ಸವಕ್ಕೆ ಬರುವ ಜನರನ್ನು ಹೇಗೆ ನಿಯಂತ್ರಿಸುವುದು ಎಂಬುದು ಸಭೆಯಲ್ಲಿ ಚರ್ಚೆಯ ಮುಖ್ಯ ವಿಷಯವಾಗಿತ್ತು. ಪೂರಂ ಬಗ್ಗೆ ಜಿಲ್ಲಾಡಳಿತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದಿದ್ದಲ್ಲಿ ಸರ್ಕಾರಕ್ಕೆ ಮಾರ್ಗದರ್ಶನ ನೀಡುವಂತೆ ಕೋರಿ ಜಿಲ್ಲಾಧಿಕಾರಿ ಮೊನ್ನೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಮುಖ್ಯ ಕಾರ್ಯದರ್ಶಿ ಸಭೆ ಕರೆದಿದ್ದರು.
ಈ ತಿಂಗಳ 17 ರಂದು ಪೂರಂ ಉತ್ಸವಕ್ಕೆ ಧ್ವಜಾರೋಹಣ ನಡೆಯಲಿದೆ. ತ್ರಿಶೂರ್ ಪೂರಂ 23 ರಂದು ನಡೆಯಲಿದೆ.